ಬೆಂಗಳೂರು : ನಾಯಿ ಸಾಕುವವರು ಇನ್ನುಂದೆ ಹುಷಾರಾಗಿರಬೇಕು….ನೀವು ವಾಕಿಂಗ್ ಗೆ ನಾಯಿ ಕರೆದುಕೊಂಡು ಹೋಗಿ..ನಾಯಿ ಪಾರ್ಕ್ ನಲ್ಲಿ ಮಲ-ಮೂತ್ರ ವಿಸರ್ಜಿಸಿದ್ರೆ ನಿಮಗೆ ದಂಡ ಬೀಳೋದು ಗ್ಯಾರೆಂಟಿ…ಈ ಕುರಿತು ಕೋರ್ಟ್ ಖಡಕ್ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿರುವ ಪಾರ್ಕ್ ಗಳ ಸ್ವಚ್ಚತೆ ಕಾಯ್ದುಕೊಳ್ಳಲು ಹೈಕೋರ್ಟ್ ಹಲವು ಮಾರ್ಗಸೂಚಿ ರಚಿಸಿದ್ದು, ತಪ್ಪಿದ್ದಲ್ಲಿ ದಂಡ ವಿಧಿಸಲು ತೋಟಗಾರಿಕೆ ಇಲಾಖೆ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಸರ್ಕಾರೇತರ ಸಂಘ ‘ಮೆಸೆರ್ಸ್ಂಪ್ಯಾಷನ್ ಅನ್ಸಿಮಿಟೆಡ್ ಪ್ಲಸ್ ಅಕ್ಷನ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಮಾರ್ಗಸೂಚಿ ಹೊರಡಿಸಿದೆ. ಉದ್ಯಾನವನಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ತೋಟಗಾರಿಕೆ ಇಲಾಖೆ, ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ವಿಫಲರಾಗಿದ್ದು, ಈ ಬಗ್ಗೆ ಜನರಿಂದ 1288 ದೂರು ದಾಖಲಾಗಿವೆ.ಸಾರ್ವಜನಿಕ ಉದ್ಯಾನ ಗಳಲ್ಲಿ ಎಲ್ಲ ರೀತಿಯ ಸಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದೆ.
ತೋಟಗಾರಿಕೆ ಇಲಾಖೆಯ ಇಬ್ಬರು ಅಧಿಕಾರಿ, ಬಿಬಿಎಂಪಿಯ ಮೂವರು ಸದಸ್ಯರ ತಂಡ ರಚಿಸಬೇಕು. ಈ ತಂಡ ಕಾಲಕಾಲಕ್ಕೆ ನಗರದ ಎಲ್ಲ ಪ್ರಮುಖ ಉದ್ಯಾನಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ವಚ್ಛತೆಗೆ ಅಗತ್ಯ, ಪರಿಣಾಮಕಾರಿ ಕ್ರಮ ರೂಪಿಸಿ ಜಾರಿಗೊಳಿಸಬೇಕು. ಉದ್ಯಾನ ಪ್ರದೇಶ ಮತ್ತು ಅವರಣ ದಲ್ಲಿ ಉಗುಳುವುದು, ಕಸ ಎಸೆಯ ವುದು ಸಾಕು ಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ಮಾಡುವುದನ್ನು ನಿಯಂತ್ರಿಸುವ, ಸ್ವಚ್ಛತೆ ಕಾಯ್ದು ಕೊಳ್ಳಬೇಕು. ಅದನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಜವಾಬ್ದಾರಿಯನ್ನು ತಪ್ಪದೇ ಪಾಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.