ಉದಯಪುರ ಅರಮನೆ ಪ್ರವೇಶಕ್ಕಾಗಿ ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, 3 ಮಂದಿಗೆ ಗಾಯವಾಗಿದೆ.
ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮತ್ತು ಅವರ ಬೆಂಬಲಿಗರಿಗೆ ಅವರ ಸೋದರ ಸಂಬಂಧಿ ಮತ್ತು ಚಿಕ್ಕಪ್ಪ ಶ್ರೀಜಿ ಅರವಿಂದ್ ಸಿಂಗ್ ಮೇವಾರ್ ನಿರ್ವಹಿಸುತ್ತಿರುವ ಸಿಟಿ ಪ್ಯಾಲೇಸ್‌ಗೆ ಪ್ರವೇಶ ನಿರಾಕರಿಸಿದ ನಂತರ ಉದಯಪುರದಲ್ಲಿ ಸೋಮವಾರ ಸಂಜೆ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅರಮನೆಯ ಹೊರಗೆ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಅರಮನೆಯ ಒಳಗಿನಿಂದ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ.
ಈ ತಿಂಗಳ ಆರಂಭದಲ್ಲಿ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರ ನಿಧನದ ನಂತರ ಸೋಮವಾರ ಬೆಳಿಗ್ಗೆ ಚಿತ್ತೋರಗಢ ಕೋಟೆಯಲ್ಲಿ ವಿಶ್ವರಾಜ್ ಸಿಂಗ್ ಅವರನ್ನು ಹಿಂದಿನ ರಾಜಮನೆತನದ ಮುಖ್ಯಸ್ಥರಾಗಿ ಅಯ್ಕೆ ಮಾಡಲಾಯಿತು.
ರಜಪೂತ ರಾಜ ಮಹಾರಾಣಾ ಪ್ರತಾಪ್‌ನ ವಂಶಸ್ಥರಾದ ಮಹೇಂದ್ರ ಸಿಂಗ್ ಮೇವಾರ್ ಮತ್ತು ಅವರ ಕಿರಿಯ ಸಹೋದರ ಅರವಿಂದ್ ಸಿಂಗ್ ಮೇವಾರ್ ನಡುವಿನ ದ್ವೇಷದ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆ.
ವಿಶ್ವರಾಜ್ ಸಿಂಗ್ ಅವರ ಚಿಕ್ಕಪ್ಪ ಅರವಿಂದ್ ಸಿಂಗ್ ಅವರು ರಾಜಮನೆತನದ ವಿಧಿವಿಧಾನಗಳ ಭಾಗವಾಗಿ ಉದಯಪುರದ ಏಕಲಿಂಗನಾಥ ದೇವಾಲಯ ಮತ್ತು ನಗರದ ಅರಮನೆಗೆ ಹೊಸದಾಗಿ ನಿಯೋಜಿಸಲಾದ ರಾಜಮನೆತನದ ಮುಖ್ಯಸ್ಥರ ಯೋಜಿತ ಭೇಟಿಗೆ ವಿರೋಧ ವ್ಯಕ್ತವಾಗಿದೆ.
#WATCH | Udaipur, Rajasthan: Dispute within the former royal family turned violent as supporters of BJP MLA Vishvaraj Singh Mewar, who was crowned as the 77th Maharana of Mewar, clashed with City Palace representatives, leading to stone-pelting.
After the coronation ceremony… pic.twitter.com/4KU6nASAUE
— ANI (@ANI) November 25, 2024