ಬೆಂಗಳೂರು: ಕಡಿಮೆ ದರದ ಕೆಲವು ಬಿಯರ್ ಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದ ಸರ್ಕಾರ ಸದ್ಯಕ್ಕೆ ದರ ಹೆಚ್ಚಳ ನಿರ್ಧಾರವನ್ನು ಮುಂದೂಡಿದೆ ಎಂದು ಹೇಳಲಾಗಿದೆ.
ಬಿಯರ್ ಗಳ ತಯಾರಿಕೆಯಲ್ಲಿ ಬಳಸಲಾಗುವ ಪದಾರ್ಥಗಳನ್ನು ಪರಿಗಣಿಸಿ ಕೆಲವು ಬ್ರಾಂಡ್ ಗಳ ಬಿಯರ್ ದರ ಹೆಚ್ಚಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೂಡ ಆಹ್ವಾನಿಸಲಾಗಿದೆ.
ಚಳಿಗಾಲದ ಹಿನ್ನೆಲೆಯಲ್ಲಿ ಬಿಯರ್ ಮಾರಾಟ ಕಡಿಮೆ. ಚಳಿಗಾಲದಲ್ಲಿ ಮದ್ಯಪ್ರಿಯರು ಹೆಚ್ಚಾಗಿ ಬಿಯರ್ ಸೇವನೆ ಮಾಡುವುದಿಲ್ಲ. ಬೊಕ್ಕಸಕ್ಕೆ ರಾಜಸ್ವ ಸಂಗ್ರಹ ಕೂಡ ಕಡಿಮೆಯಾಗಿರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ದರ ಹೆಚ್ಚಳ ಮಾಡಿದರೆ ಆದಾಯ ಕಡಿಮೆಯಾಗುತ್ತದೆ. ಹೀಗಾಗಿ ಜನವರಿವರೆಗೆ ಕಾದು ನೋಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.