ಕೊರ್ಬಾ: ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಂಬುಲೆನ್ಸ್ ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಹಿಳೆ ಮತ್ತು ಅವರ ಎರಡು ನವಜಾತ ಶಿಶುಗಳು ಸಾವನ್ನಪ್ಪಿವೆ.
ಸೋಮವಾರ ಈ ಘಟನೆ ಸಂಭವಿಸಿದ್ದು, ಅಂಗನವಾಡಿ ಕಾರ್ಯಕರ್ತೆ ಕಾಂತಿ ರಥಿಯಾ ಎಂದು ಗುರುತಿಸಲಾದ ಮೃತ ಮಹಿಳೆ ಕಾರ್ತಾಳ ಅಭಿವೃದ್ಧಿ ಬ್ಲಾಕ್‌ನ ಜೋಗಿಪಲಿ ಗ್ರಾಮದ ತನ್ನ ಮನೆಯಲ್ಲಿ ಅಕಾಲಿಕ ಹೆರಿಗೆಯ ಸಮಯದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಏಳು ತಿಂಗಳಲ್ಲೇ ಅವಧಿಪೂರ್ವ ಹೆರಿಗೆಯಾಗಿ ನವಜಾತ ಶಿಶುಗಳ ಆರೋಗ್ಯ ಗಂಭೀರವಾಗಿರುವುದರಿಂದ, ಅವರ ತಾಯಿಯೊಂದಿಗೆ ಆರಂಭದಲ್ಲಿ ಕಾರ್ತಲಾ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಪರೀಕ್ಷಿಸಿದ ನಂತರ, ಅಲ್ಲಿನ ಆರೋಗ್ಯ ಸಿಬ್ಬಂದಿ ಅವರನ್ನು ಕೊರ್ಬಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫಾರಸು ಮಾಡಿದರು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಕೊರಬಾದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಎಸ್.ಎನ್.ಕೇಸರಿ, ಕಾರ್ತಾಳ ಅಭಿವೃದ್ಧಿ ಬ್ಲಾಕ್ ನ ಜೋಗಿಪಲಿ ಗ್ರಾಮದ ತನ್ನ ಮನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಕಾಂತಿ ರಥಿಯಾ ಸೋಮವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗರ್ಭಧಾರಣೆಯ ಏಳನೇ ತಿಂಗಳಲ್ಲಿ ಅಕಾಲಿಕ ಹೆರಿಗೆಯಾಗಿತ್ತು. ಆರಂಭದಲ್ಲಿ ಅವರನ್ನು ಕರ್ತಾಲಾ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ನಂತರ ಅವರನ್ನು ಕೊರ್ಬಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದುರದೃಷ್ಟವಶಾತ್, ಮೂವರೂ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ ದುರಂತದ ನಂತರ, ಮೃತರ ಪತಿ ಬಿಹಾರಿ ಲಾಲ್ ರಾಥಿಯಾ ಅವರು ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕದ ಅಲಭ್ಯತೆಯಿಂದ ತನ್ನ ಹೆಂಡತಿ ಮತ್ತು ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.