ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ಇಂದಿನಿಂದ ಒಂದು ವಾರಗಳ ಕಾಲ ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ.
ಕಡಲೆಕಾಯಿ ಪರಿಷೆ ಇತಿಹಾಸದ ಬಗ್ಗೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಪ್ರಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ನೀಡಿ, ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ನೆರವೇರಿಸಿದ್ದೇನೆ. ಹಾಗೆಯೇ ದೊಡ್ಡಗಣಪತಿಯ ದರ್ಶನ ಪಡೆದೆ ಎಂದು ತಿಳಿಸಿದ್ದಾರೆ.
ಬಸವನಗುಡಿಯ ಕಡಲೆಕಾಯಿ ಪರಿಷೆಯ ಇತಿಹಾಸವು ಆಸಕ್ತಿಕರ ಕಥೆಯಗಳ ಜೊತೆ ಬೆಸೆದುಕೊಂಡಿದೆ. ಬಸವನಗುಡಿ ಸುತ್ತಮುತ್ತಲಿನ ಪ್ರದೇಶವು ಈ ಹಿಂದೆ ಕಡಲೆಕಾಯಿ ಹೊಲಗಳಾಗಿತ್ತು. ರೈತರು ಬೆಳೆದ ಕಡಲೆಕಾಯನ್ನು ಬಸವಣ್ಣ ತಿಂದು ಖಾಲಿ ಮಾಡ್ತಿದ್ನಂತೆ. ಇದರಿಂದ ಬೇಸತ್ತ ರೈತರು ಕೊನೆಗೆ ದೊಡ್ಡ ಬಸವಣ್ಣನ ಮೂರ್ತಿಗೆ ಕಡಲೆಕಾಯಿ ಅಭಿಷೇಕ ಮಾಡುವುದಾಗಿ ಹರಕೆ ಕಟ್ಟಿಕೊಂಡರಂತೆ. ಅಲ್ಲಿಂದೀಚೆಗೆ ಕಡಲೆಕಾಯಿ ಪರಷೆ ನಡೆದುಕೊಂಡು ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.