ಬರೇಲಿ: ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿ ಸೇತುವೆಯಿಂದ ಬಿದ್ದು ಮೂವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಗುರುಗ್ರಾಮದಿಂದ ಮದುವೆಗೆ ಹಾಜರಾಗಲು ಬರೇಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ ರಾತ್ರಿ ಮೂವರಿಗೆ ದಾರಿ ಗೊತ್ತಾಗದೇ ಗೂಗಲ್ ಮ್ಯಾಪ್ ಮೊರೆ ಹೋಗಿದ್ದಾರೆ. ನಂತರ ಜಿಪಿಎಸ್ ಅವರನ್ನು ನಿರ್ಮಾಣ ಹಂತದ ಫ್ಲೈಓವರ್ ಕಡೆ ಕರೆದೊಯ್ಯಿತು. ಇದೇ ದಾರಿ ಎಂದು ವೇಗವಾಗಿ ಕಾರು ಚಲಾಯಿಸಿದ್ದಾರೆ. ಸೇತುವೆಯ ಮೇಲೆ ಪ್ರಯಾಣಿಸಿದ ಕಾರು 50 ಅಡಿ ಎತ್ತರದಿಂದ ರಾಮಗಂಗಾ ನದಿಗೆ ಬಿದ್ದಿದೆ.
ಮರುದಿನ ಬೆಳಿಗ್ಗೆ ಹಾನಿಗೊಳಗಾದ ಕಾರು ಮತ್ತು ಮೂವರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ಅವರು ಸ್ಥಳಕ್ಕೆ ಬಂದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ದರು. ಕಾರು ಅಪೂರ್ಣಗೊಂಡ ಸೇತುವೆ ಮೇಲೆ ಹೋಗಿ ಅಲ್ಲಿಂದ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಶವಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಅಮಿತ್ ಮತ್ತು ವಿವೇಕ್ ಎಂಬ ಇಬ್ಬರು ವ್ಯಕ್ತಿಗಳ ಗುರುತುಗಳನ್ನು ದೃಢಪಡಿಸಲಾಗಿದೆ. ಮೃತಪಟ್ಟ ಮೂರನೆ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.