ಇವಿಎಂ ಹ್ಯಾಕ್ ನಿಂದ ಮಹಾರಾಷ್ಟ್ರದಲ್ಲಿ ಸೋಲು: ಜಿ. ಪರಮೇಶ್ವರ್

ಬೆಂಗಳೂರು: ಇವಿಎಂ ಹ್ಯಾಕ್ ನಿಂದಾಗಿ ಮಹಾರಾಷ್ಟ್ರವನ್ನು ಕಳೆದುಕೊಂಡಿದ್ದೇವೆ ಅನಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಸ್ಟ್ರಾಟಜೀ ಮಾಡುವುದರಲ್ಲಿಯೂ ಫೇಲ್ ಆಗಿದ್ದೇವೆ. ಮಹಾವಿಕಾಸ ಅಘಾಡಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ ಎಲ್ಲವೂ ಉಲ್ಟಾ ಆಗಿದೆ ಎಂದು ಹೇಳಿದ್ದಾರೆ.

ಬಹಳಷ್ಟು ಕಡೆ ಇವಿಎಂ ಮ್ಯಾನಿಪುಲೇಟ್ ಮಾಡಿದ್ದಾರೆ ಎನ್ನುವ ಶಂಕೆ ಇದೆ. ಆದರೆ, ಜಾರ್ಖಂಡ್ ಚುನಾವಣೆಯಲ್ಲಿ ಯಾಕೆ ಹಾಗಾಗಲಿಲ್ಲ ಅಂದರೆ ಬಿಜೆಪಿಯವರು ಪ್ಲಾನ್ ಆಫ್ ಆಕ್ಷನ್ ರೀತಿ ಇದನ್ನು ಮಾಡುತ್ತಾರೆ. ನಂಬಿಕೆ ಬರಬೇಕೆಂದು ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read