ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ನವೆಂಬರ್ 27ರಿಂದ ಡಿಸೆಂಬರ್ 12ರ ವರೆಗೆ ನಡೆಯಲಿದೆ.
ನವೆಂಬರ್ 25 ರಿಂದ ಡಿಸೆಂಬರ್ 12ರ ವರೆಗೆ ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ. ಇತರೆ ಸೇವೆಗಳು ಎಂದಿನಂತೆ ನಡೆಯಲಿದೆ ಎಂದು ಹೇಳಲಾಗಿದೆ.
ಲಕ್ಷ ದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿಯ ದಿನ ಕೆಲವು ಸೇವೆಗಳು ಇರುವುದಿಲ್ಲ. ನವೆಂಬರ್ 30ರಂದು ಲಕ್ಷ ದೀಪೋತ್ಸವ, ಡಿಸೆಂಬರ್ 5 ರಂದು ಚೌತಿ, ಡಿಸೆಂಬರ್ 6ರಂದು ಪಂಚಮಿಯ ದಿನ ರಾತ್ರಿ ವೇಳೆ ಪ್ರಾರ್ಥನೆ ಸೇವೆ ಇರುವುದಿಲ್ಲ. ಡಿಸೆಂಬರ್ 7ರಂದು ಚಂಪಾ ಷಷ್ಠಿ ದಿನ ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ.
ಚಂಪಾಷಷ್ಠಿಯ ದಿನ ಆಶ್ಲೇಷ ಬಲಿ ಮತ್ತು ನಾಗ ಪ್ರತಿಷ್ಠೆ ನೆರವೇರಿಸುವುದಿಲ್ಲ. ಲಕ್ಷ ದೀಪೋತ್ಸವ, ಚೌತಿ, ಪಂಚಮಿ ಚಂಪಾಷಷ್ಠಿ ದಿನ ಮತ್ತು ಕೊಪ್ಪರಿಗೆ ಇಳಿಯುವ ಮಹಾ ಸಂಪ್ರೋಕ್ಷಣೆಯ ದಿನ ಡಿಸೆಂಬರ್ 12ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ.
ನವೆಂಬರ್ 27ರಿಂದ ಡಿಸೆಂಬರ್ 12ರ ವರೆಗೆ ಸಂಜೆಯ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನವೆಂಬರ್ 26ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯ ಇರುವುದರಿಂದ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನ ಸೇವೆ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.