ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಸಾದವನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಪಡೆಯಲು ಅಂಚೆ ಇಲಾಖೆ ವ್ಯವಸ್ಥೆ ಕಲ್ಪಿಸಿದೆ.
ಪ್ರಸಾದ ಚೀಲದಲ್ಲಿ ಅರವಣ, ತುಪ್ಪ, ವಿಭೂತಿ, ಅರ್ಚನೆ ಪ್ರಸಾದ, ಮಾಳಿಕಪ್ಪುರಂ ಭಗವತಿ ಅಮ್ಮನ ಕುಂಕುಮ ಮತ್ತು ಅರಿಶಿಣ ಪ್ರಸಾದ ಇರುತ್ತದೆ. ಒಂದು ಟಿನ್ ಅರವಣ ಇರುವ ಕಿಟ್ ಗೆಗೆ 520 ರೂ., 4 ಅರವಣ ಇರುವ ಕಿಟ್ ಗೆ 960 ರೂ., 10 ಅರವಣ ಇರುವ ಕಿಟ್ ಗೆಕಿ 1760 ರೂ. ನಿಗದಿಪಡಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿ, ಅಂಚೆ ಇಲಾಖೆ ಜಂಟಿಯಾಗಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಭಾರತದ ಯಾವುದೇ ಅಂಚೆ ಕಚೇರಿಯಲ್ಲಿ ಬುಕ್ ಮಾಡಬಹುದಾಗಿದೆ.
ಕಾಣಿಕೆ, ಅಪ್ಪಂ ಮತ್ತು ಅರವಣ ಪ್ರಸಾದದಿಂದ ಈ ಬಾರಿ ಆದಾಯ ಹೆಚ್ಚಾಗಿದೆ. ಕಾಣಿಕೆಯಿಂದ 3.11 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅರವಣ ಮಾರಾಟದ ಮೂಲಕ 9.52 ಕೋಟಿ ರೂ., ಅಪ್ಪಂ ಮಾರಾಟದ ಮೂಲಕ 1.26 ಕೋಟಿ ರೂಪಾಯಿ ಲಭಿಸಿದೆ.