ನವದೆಹಲಿ: ಕೆಲವು ತಿಂಗಳ ಹಿಂದೆ ಶೇಕಡ 20ಕ್ಕೂ ಅಧಿಕ ಪ್ರಮಾಣದಲ್ಲಿ ಮೊಬೈಲ್ ರೀಚಾರ್ಜ್ ದರಗಳ ಏರಿಕೆ ಮಾಡಿದ್ದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಗ್ರಾಹಕರನ್ನು ನಿರಂತರವಾಗಿ ಕಳೆದುಕೊಳ್ಳತೊಡಗಿವೆ.
ಟ್ರಾಯ್ ಬಿಡುಗಡೆ ಮಾಡಿರುವ ಸೆಪ್ಟಂಬರ್ ತಿಂಗಳ ದತ್ತಾಂಶದ ಪ್ರಕಾರ ಜಿಯೋ, ಏರ್ಟೆಲ್, ವಿಐ ಕಂಪನಿಗಳಿಂದ ಒಂದು ಕೋಟಿಗೂ ಅಧಿಕ ಚಂದಾದಾರರು ವಲಸೆ ಹೋಗಿದ್ದಾರೆ. ಇಲ್ಲವೇ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ಬಿಎಸ್ಎನ್ಎಲ್ ಚಂದಾದಾರರ ಸಂಖ್ಯೆ 8.49 ಲಕ್ಷ ಹೆಚ್ಚಾಗಿದೆ.
ಜಿಯೋಗೆ 79.96 ಲಕ್ಷ ಚಂದಾದಾರರು ಗುಡ್ ಬೈ ಹೇಳಿದ್ದಾರೆ. ಭಾರತೀಯ ಏರ್ಟೆಲ್ ನಿಂದ 14.34 ಲಕ್ಷ, ವೊಡಾಫೋನ್ ಐಡಿಯಾದಿಂದ 15.53 ಲಕ್ಷ ಚಂದಾದಾರರು ಹೊರ ಹೋಗಿದ್ದಾರೆ. ರಿಚಾರ್ಜ್ ದರ ಏರಿಕೆ ಮಾಡಿದ್ದರಿಂದ ಎಲ್ಲರೂ ಬಿಎಸ್ಎನ್ಎಲ್ ಗೆ ಸೇರ್ಪಡೆಯಾಗಿಲ್ಲ. ಹೆಚ್ಚುವರಿ ಸಿಮ್ ಇಟ್ಟುಕೊಂಡವರು ಅದರ ಚಾಲ್ತಿಯನ್ನು ರದ್ದು ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.