ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಬೇರೆ ಯಾರದ್ದೇ ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಆಗಿದ್ದರೆ, ಅವುಗಳನ್ನು 1 ವಾರದಲ್ಲಿ ಸರಿಪಡಿಸಲಾಗುವುದು. ಹಳೆಯ ಕಾರ್ಡ್ ಹಾಗೂ ನಂಬರ್ ಬಳಸಿ ಹಿಂದಿನಂತೆಯೇ ಆಹಾರ ಧಾನ್ಯ ಪಡೆಯಲೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.
ಅನರ್ಹ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ಮುಂದಾಗಿದ್ದ ಸರ್ಕಾರ ಪರಿಷ್ಕರಣೆ ಕಾರ್ಯವನ್ನು ಕೈ ಬಿಟ್ಟು ಯಥಾಸ್ಥಿತಿ ಮುಂದುವರಿಕೆಗೆ ಆದೇಶಿಸಿದೆ. ರದ್ದಾಗಿದ್ದರೂ ಹಳೆಯ ಬಿಪಿಎಲ್ ಕಾರ್ಡ್ ತೋರಿಸಿ ಪಡಿತರ ಪಡೆಯಲು ಅವಕಾಶ ನೀಡಲಾಗಿದೆ. 4036 ಸರ್ಕಾರಿ ನೌಕರರು, ತೆರಿಗೆ ಪಾವತಿಸುವ 94,473 ಮಂದಿ ಸೇರಿ 1.02 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಹೊರಗಿಟ್ಟು ಯಥಾಸ್ಥಿತಿ ಮುಂದುವರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ.