ರಾಯಚೂರು: ಅನರ್ಹ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ಮುಂದಾಗಿದ್ದ ಸರ್ಕಾರ ಪರಿಷ್ಕರಣೆ ಕಾರ್ಯವನ್ನು ಕೈ ಬಿಟ್ಟು ಯಥಾಸ್ಥಿತಿ ಮುಂದುವರೆಕೆಗೆ ಆದೇಶಿಸಿದೆ.
ರದ್ದಾಗಿದ್ದರೂ ಹಳೆಯ ಬಿಪಿಎಲ್ ಕಾರ್ಡ್ ತೋರಿಸಿ ಪಡಿತರ ಪಡೆಯಲು ಅವಕಾಶ ನೀಡಲಾಗಿದೆ. 4036 ಸರ್ಕಾರಿ ನೌಕರರು, ತೆರಿಗೆ ಪಾವತಿಸುವ 94,473 ಮಂದಿ ಸೇರಿ 1.02 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಹೊರಗಿಟ್ಟು ಯಥಾಸ್ಥಿತಿ ಮುಂದುವರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದ 69 ಸರ್ಕಾರಿ ನೌಕರರಿಂದ 9.81 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಸರ್ಕಾರಿ ಸೇವೆಯಲ್ಲಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದವರ ಮಾಹಿತಿಯನ್ನು ಆಹಾರ ಇಲಾಖೆ ಸಂಗ್ರಹಿಸಿದ್ದು, ಒಟ್ಟು 174 ಸರ್ಕಾರಿ ನೌಕರರು ಲಿಂಗಸುಗೂರು ತಾಲೂಕಿನಲ್ಲಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರು. ಎಲ್ಲರಿಗೂ ನೋಟಿಸ್ ನೀಡಲಾಗಿತ್ತು. ಅನೇಕರು ಸ್ವಇಚ್ಛೆಯಿಂದ ಕಾರ್ಡ್ ಗಳನ್ನು ಆಹಾರ ಇಲಾಖೆಗೆ ಮರಳಿಸಿದ್ದಾರೆ. ವಾಪಸ್ ನೀಡದ 69 ಸರ್ಕಾರಿ ನೌಕರರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.