ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಊಹಿಸಲಾಗದ ಪ್ರಕರಣವೊಂದು ವರದಿಯಾಗಿದ್ದು, ಮಹಿಳೆಯೊಬ್ಬರು ಮದುವೆಯಾದ 4 ವರ್ಷಗಳ ಬಳಿಕ ತನ್ನ ಪತಿಯ ಅಸಲಿಯತ್ತನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ತನ್ನ ಗಂಡ ಪುರುಷನಲ್ಲ, ನಪುಂಸಕ ಎಂದು ಪತ್ನಿಗೆ ಇಷ್ಟು ವರ್ಷಗಳ ಬಳಿಕ ಅರಿವಾಗಿದೆ.
ದಂಪತಿ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟಿದ್ದು, ಇಷ್ಟು ವರ್ಷಗಳಾದರೂ ಪತಿ ತನ್ನ ಪತ್ನಿ ಜೊತೆ ಲೈಂಗಿಕ ಸಂಬಂಧ ಹೊಂದಿರಲಿಲ್ಲ. ಆತನ ಪತ್ನಿ ಕಾರಣ ಕೇಳಿದಾಗಲೆಲ್ಲಾ ವೈದ್ಯಕೀಯ ಸಮಸ್ಯೆಗಳನ್ನು ಉಲ್ಲೇಖಿಸಿ, ತಾನು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ ಎಂದು ಹೇಳುತ್ತಿದ್ದ. ಆಕೆಯೂ ಇದನ್ನು ನಂಬಿಕೊಂಡಿದ್ದಳು. ಇತ್ತೀಚೆಗೆ ತನ್ನ ಪತಿ ಸೀರೆ ಮತ್ತು ಮೇಕಪ್ ಧರಿಸಿ ನಪುಂಸಕರೊಂದಿಗೆ ಬೆರೆಯುವುದನ್ನು ಮಹಿಳೆ ನೋಡಿದಾಗ ಸತ್ಯ ಬೆಳಕಿಗೆ ಬಂದಿದೆ.
ಇದೀಗ ನೊಂದ ಮಹಿಳೆ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದು, ಇದನ್ನು ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಆರಂಭವಾಗಿದೆ.
ಮಾಹಿತಿಯ ಪ್ರಕಾರ, ದಂಪತಿ 2020 ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದು, ಮಹಿಳೆಯ ಮನೆಯವರು ವರದಕ್ಷಿಣೆಯಾಗಿ ಲಕ್ಷಾಂತರ ರೂಪಾಯಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು. ಅಲ್ಲದೇ ಬಳಿಕ ಪತಿಯ ಕುಟುಂಬದವರು ರೂ. 2 ಲಕ್ಷ ಮತ್ತು ಸ್ಕೂಟರ್ ಗೆ ಬೇಡಿಕೆ ಇಟ್ಟಿದ್ದು, ಅದು ಈಡೇರದಿದ್ದಾಗ ಆಕೆಯನ್ನು ಮನೆಯಿಂದ ಹೊರಹಾಕಿ ಮತ್ತೆ ತಾಯಿಯ ಮನೆಗೆ ಕಳುಹಿಸಲಾಗಿತ್ತು.
ಕೆಲವು ದಿನಗಳ ನಂತರ, ಮಹಿಳೆ ಶಾಪಿಂಗ್ ಮಾಡಲು ಸ್ಥಳೀಯ ಮಾರುಕಟ್ಟೆಗೆ ಹೋಗಿದ್ದು, ಅವಳಿಗೆ ಆಶ್ಚರ್ಯವಾಗುವಂತೆ, ತನ್ನ ಗಂಡ ಹೆಣ್ಣಿನ ವೇಷದಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ್ದಾಳೆ. ಇದಾದ ಬಳಿಕ ಪತಿ ಅಸಲಿಯತ್ತು ಕಂಡು ಪೊಲೀಸರಿಗೆ ದೂರು ನೀಡಿದ್ದಾಳೆ.
ಗ್ವಾಲಿಯರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೊಲೀಸ್ ಅಧಿಕಾರಿಗಳು ಇದನ್ನು ವರದಕ್ಷಿಣೆ ಕಿರುಕುಳ ಮತ್ತು ಭಾವನಾತ್ಮಕ ನಿಂದನೆ ಪ್ರಕರಣವೆಂದು ಪರಿಗಣಿಸುತ್ತಿದ್ದು, ಪತಿಯ ಕ್ರಮಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.