ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಬೈಕ್ ಅಪಘಾತವಾಗಿ ಮೂವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ರ್ಯಾಪಿಡೋ ಬೈಕ್ ನಲ್ಲಿದ್ದ ಮೂವರು ಸವಾರರಿಗೆ ಗಾಯಗಳಾಗಿವೆ.
ರೈಲ್ವೆ ನಿಲ್ದಾಣದಿಂದ ಇಬ್ಬರನ್ನು ಬೈಕ್ ಸವಾರ ಪಿಕ್ ಅಪ್ ಮಾಡಿದ್ದು, ಮುಂದೆ ಸಾಗುವಾಗ ಟ್ಯಾಂಕರ್ ಮತ್ತು ಆಟೋ ಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಹಾಕದೆ ಇದ್ದ ಕಾರಣ ತಲೆಗೆ ಪೆಟ್ಟಾಗಿದೆ. ಮೂವರು ಗಾಯಾಳಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.