ಬೆಂಗಳೂರು : ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಕೂಡಾ ಶ್ರೀಮತಿ ಇಂದಿರಾಗಾಂಧಿಯವರಿಂದ ಪ್ರೇರಣೆ ಪಡೆದಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವಂತಹ ಸಿಎಂ ಸಿದ್ದರಾಮಯ್ಯ ”ಬಡವರ ಬಗ್ಗೆ ಅವರ ಹೃದಯ ಸದಾ ಮಿಡಿಯುತ್ತಿತ್ತು. ಗರೀಬಿ ಹಟಾವೋ ಎಂದು ಹೇಳುತ್ತಾ ಬಡತನದ ವಿರುದ್ಧ ಅವರು ಸಮರವನ್ನೇ ಸಾರಿದ್ದರು.ಸರ್ವರಿಗೂ ಸಮಪಾಲು ನೀಡುವ ಸ್ವಾವಲಂಬಿ ಮತ್ತು ಜಾತ್ಯತೀತ ಭಾರತದ ರೂವಾರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಅವರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯುತ್ತೇನೆ. ಅವರ ಬಡವರ ಪರವಾದ ಕಾಳಜಿ ಮತ್ತು ಅಭಿವೃದ್ಧಿಯ ಮುನ್ನೋಟದಿಂದ ನಾನು ಪ್ರೇರಿತನಾಗಿದ್ದೇನೆ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಕೂಡಾ ಶ್ರೀಮತಿ ಇಂದಿರಾಗಾಂಧಿಯವರಿಂದ ಪ್ರೇರಣೆ ಪಡೆದಿವೆ. ಬಡವರ ಬಗ್ಗೆ ಅವರ ಹೃದಯ ಸದಾ ಮಿಡಿಯುತ್ತಿತ್ತು. ಗರೀಬಿ ಹಟಾವೋ ಎಂದು ಹೇಳುತ್ತಾ ಬಡತನದ ವಿರುದ್ಧ ಅವರು ಸಮರವನ್ನೇ ಸಾರಿದ್ದರು. ಪ್ರಧಾನ ಮಂತ್ರಿಯಾಗಿ ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಸ್ಥಾಪನೆಯೂ ಸೇರಿದಂತೆ ಅವರು ದಿಟ್ಟತನದಿಂದ ಕಾರ್ಯರೂಪಕ್ಕೆ ತಂದಿದ್ದ ಜನಪರ ನೀತಿ-ನಿರ್ಧಾರಗಳು ನಮ್ಮ ಕಣ್ಣಮುಂದೆಯೇ ಬುಡಮೇಲು ಆಗುತ್ತಿದೆ. ಈ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಶ್ರೀಮತಿ ಇಂದಿರಾಗಾಂಧಿಯವರ ಬದುಕು ಮತ್ತು ಚಿಂತನೆ ನಮಗೆಲ್ಲ ಪ್ರೇರಣೆಯಾಗಲಿ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ವರಿಗೂ ಸಮಪಾಲು ನೀಡುವ ಸ್ವಾವಲಂಬಿ ಮತ್ತು ಜಾತ್ಯತೀತ ಭಾರತದ ರೂವಾರಿ ಶ್ರೀಮತಿ ಇಂದಿರಾಗಾಂಧಿಯವರನ್ನು ಅವರ ಹುಟ್ಟುಹಬ್ಬದ ದಿನ ಗೌರವದಿಂದ ನೆನೆಯುತ್ತೇನೆ. ಅವರ ಬಡವರ ಪರವಾದ ಕಾಳಜಿ ಮತ್ತು ಅಭಿವೃದ್ಧಿಯ ಮುನ್ನೋಟದಿಂದ ನಾನು ಪ್ರೇರಿತನಾಗಿದ್ದೇನೆ.
ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಪಂಚ ಗ್ಯಾರಂಟಿ… pic.twitter.com/ef9z0M4bxl
— Siddaramaiah (@siddaramaiah) November 19, 2024