ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಮೇಲೆ ಶನಿವಾರ ಎರಡು ಬಾಂಬ್ ಗಳನ್ನು ಹಾರಿಸಲಾಗಿದೆ.
ಅದೃಷವಶಾತ್ ನೆತನ್ಯಾಹು ಅಥವಾ ಅವರ ಕುಟುಂಬ ಮನೆಯಲ್ಲಿ ಇರಲಿಲ್ಲ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಇಸ್ರೇಲಿ ಪೊಲೀಸರು, ಶಿನ್ ಬೆಟ್ ಆಂತರಿಕ ಭದ್ರತಾ ಏಜೆನ್ಸಿಯೊಂದಿಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಘಟನೆಯನ್ನು “ಗಂಭೀರ” ಎಂದು ವಿವರಿಸಿದ್ದಾರೆ. ಬಾಂಬ್ ಸಾಧನಗಳು ನೆತನ್ಯಾಹು ಅವರ ನಿವಾಸದ ಹೊರಗಿನ ಅಂಗಳದಲ್ಲಿ ಬಂದು ಬಿದ್ದಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಈ ದಾಳಿಯನ್ನು ಖಂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. “ನಾನು ಈಗ ಶಿನ್ ಬೆಟ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ ಮತ್ತು ಘಟನೆಗೆ ಕಾರಣರಾದವರನ್ನು ಆದಷ್ಟು ಬೇಗ ತನಿಖೆ ಮಾಡುವ ಮತ್ತು ವ್ಯವಹರಿಸುವ ತುರ್ತು ಅಗತ್ಯವನ್ನು ವ್ಯಕ್ತಪಡಿಸಿದ್ದೇನೆ” ಎಂದು ಹೆರ್ಜೋಗ್ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.ದಾಳಿಯ ದುಷ್ಕರ್ಮಿಗಳನ್ನು ಗುರುತಿಸಲಾಗಿಲ್ಲವಾದರೂ, ಅಕ್ಟೋಬರ್ 19 ರಂದು ನೆತನ್ಯಾಹು ಅವರ ನಿವಾಸದ ಮೇಲೆ ಡ್ರೋನ್ ದಾಳಿಯನ್ನು ಅನುಸರಿಸಿ ಈ ಘಟನೆ ನಡೆದಿದೆ ಎಂದು ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಹೇಳಿಕೊಂಡಿದೆ. ಹಿಜ್ಬುಲ್ಲಾ ತನ್ನನ್ನು ಮತ್ತು ತನ್ನ ಪತ್ನಿಯನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ ಎಂದು ನೆತನ್ಯಾಹು ಆರೋಪಿಸಿದ್ದರು.
Two Flares were fired earlier tonight at a Guard Shack outside the Home of Israeli Prime Minister Benjamin Netanyahu, in the Northern Town of Caesarea, the same Home that a Hezbollah Drone struck in October. Both Israeli Police and Shin Bet are Investigating. pic.twitter.com/0BfYEaN4Bq
— OSINTdefender (@sentdefender) November 16, 2024