ಟ್ರಾಲಿ ಬ್ಯಾಗ್ ಗಳಲ್ಲಿ ವನ್ಯಜೀವಿಗಳನ್ನಿಟ್ಟು ಕಳ್ಳ ಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ವಿದೇಶದಿಂದ ಬೆಂಗಳೂರಿಗೆ ವನ್ಯಜೀವಿಗಳನ್ನು ಟ್ರಾಲಿ ಬ್ಯಾಗ್ ನಲ್ಲಿಟ್ಟುಕೊಂಡು ತಂದಿದ್ದರು. ಕೌಲಾಲಂಪುರದಿಂದ ಬೆಂಗಳೂರು ಏರ್ ಪೋರ್ಟ್ ಗೆ ಬಂದ ಇಬ್ಬರು ಆರೋಪಿಗಳ ಟ್ರಾಲಿ ಬ್ಯಾಗ್ ಪರಿಶೀಲಿಸಿದಾಗ ಅಪರೂಪದ ವಿವಿಧ ಬಗೆಯ ವನ್ಯಜೀವಿಗಳು ಪತ್ತೆಯಾಗಿವೆ.
ಒಂದು ಟ್ರಾಲಿ ಬ್ಯಾಗ್ ನಲ್ಲಿ ಅಲ್ಡಾಬ್ರಾ ದೈತ್ಯ ಆಮೆಗಳು, ಕೆಂಪು ಕಾಲಿನ ಆಮೆಗಳು, ಹಲ್ಲಿಗಳು, ಶಿಂಗಲ್ ಬ್ಯಾಕ್ ಸ್ಕಿಂಕ್ ಗಳು , ಜುವೆನೈಲ್ ಘೆಂಡಾಮೃಗ ಇಗುವಾನ, ಅಲ್ಟಿನೋ ಬ್ಯಾಟ್ ಸೇರಿದಂತೆ 24 ಪ್ರಾಣಿಗಳು ಪತ್ತೆಯಾಗಿವೆ. ಇನ್ನೊಂದು ಟ್ರಾಲಿ ಬ್ಯಾಗ್ ನಲ್ಲಿ ಲುಟಿನೊ ಇಗುವಾನಾ, ಅಗೈನ್ ಗಿಬ್ಬನ್, ಬೇಬಿ ಅಮೆರಿಕನ್ ಆಲಿಗೇಟರ್ ಗಳು, ಮರಿ ಚಿರತೆ ಆಮೆಗಳು ಸೇರಿ 16 ಜೀವಿಗಳು ಪತ್ತೆಯಾಗಿವೆ. ಒಟ್ಟು 40 ವನ್ಯಜೀವಿಗಳನ್ನು ರಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.