ಜಮೀನಿನಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ ಬಳಿ ನಡೆದಿದೆ.
ಪ್ರಥಮೇಶ್ ಪಾಟೀಲ್(19) ಸ್ಥಳದಲ್ಲೇ ಮೃತಪಟ್ಟವರು ಎಂದು ಹೇಳಲಾಗಿದೆ. ಅವರು ಮೂಲತಃ ಮಹಾರಾಷ್ಟ್ರದ ಈಚಲಕರಂಜಿಯವರು. ವಿದ್ಯಾಭ್ಯಾಸಕ್ಕಾಗಿ ತುಬಚಿಯಲ್ಲಿ ತಾತನ ಮನೆಯಲ್ಲಿ ವಾಸವಾಗಿದ್ದರು. ಘಟನಾ ಸ್ಥಳಕ್ಕೆ ಸಾವಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.