ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ಎಲ್ಲರ ಗಮನ ಸೆಳೆದಿದ್ದ, ವರುಣ್ ತೇಜ್ ಅಭಿನಯದ ಬಹು ನಿರೀಕ್ಷಿತ ‘ಮಟ್ಕಾ’ ಚಿತ್ರ ನಾಳೆ ವಿಶ್ವಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಕರುಣ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ವರುಣ್ ತೇಜ್, ಮೀನಾಕ್ಷಿ ಚೌದರಿ, ಹಾಗೂ ನೋರಾಫತೇಹಿ, ಪ್ರಮುಖ ಪಾತ್ರದಲ್ಲಿದ್ದು, ನವೀನ್ ಚಂದ್ರ, ಕನ್ನಡ ಕಿಶೋರ್, ಅಜಯ್ ಘೋಷ್, ಮೈಮ್ ಗೋಪಿ, ರೂಪಲಕ್ಷ್ಮಿ, ವಿಜಯರಾಮ ರಾಜು, ಜಗದೀಶ್, ರಾಜ್ ತಿರಂದಾಸ್. ಉಳಿದ ತಾರಂಗಣದಲ್ಲಿದ್ದಾರೆ. ಎಸ್ಆರ್ಟಿ ಎಂಟರ್ಟೈನ್ಮೆಂಟ್ ವೈರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಡಾ ವಿಜೇಂದರ್ ರೆಡ್ಡಿ ಮತ್ತು ರಜನಿ ತಲ್ಲೂರಿ ನಿರ್ಮಾಣ ಮಾಡಿದ್ದು, ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಕಾರ್ತಿಕ ಶ್ರೀನಿವಾಸ್ ಆರ್ ಸಂಕಲನ, ಎ ಕಿಶೋರ್ ಕುಮಾರ್ ಛಾಯಾಗ್ರಹಣ, ವಿಜಯ್ ಮಾಸ್ಟರ್, ರಾಮ್ ಸುಂಕರ, ನಿಖಿಲ್ ಸಾಹಸ ನಿರ್ದೇಶನವಿದೆ.