ಕೊಪ್ಪಳ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಜಾಮೀನು ಮಂಜೂರು ಮಾಡಿದೆ.
2014ರಲ್ಲಿ ನಡೆದ ಜಾತಿ ಸಂಘರ್ಷ, ಗಲಭೆ ಪ್ರಕರಣದಲ್ಲಿ 101 ಆರೋಪಿಗಳ ಪೈಕಿ 98 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. 98 ಅಪರಾಧಿಗಳ ಪೈಕಿ ಎ-1 ಬಿಟ್ಟು 97 ಮಂದಿ ಆರೋಪಿಗಳಿಗೆ ಹೈಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿದೆ.
ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರು. ಪ್ರಕರಣದಲ್ಲಿ 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು..2014ರ ಆಗಸ್ಟ್ 28 ರಂದು ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ನಡೆದಿತ್ತು. ದಲಿತರ ಮನೆ ಸುಟ್ಟು ದಾಳಿ ಮಾಡಿದ ಪ್ರಕರಣದಲ್ಲಿ 101 ಮಂದಿ ಅಪರಾಧಿಗಳು ಎಂದು ಅ. 21ರಂದು ನ್ಯಾಯಾಧೀಶರು ಘೋಷಿಸಿದ್ದರು. ಸಿನಿಮಾ ನೋಡಲು ಹೋದಾಗ ದಲಿತ ಮಂಜುನಾಥನ ಮೇಲೆ ಹಲ್ಲೆ ನಡೆಸಲಾಗಿತ್ತು. ತಮ್ಮೂರಿನ ದಲಿತರೇ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮದ ಜನರಿಗೆ ಮಂಜುನಾಥ ಹೇಳಿದ್ದ. ನಂತರ ಎರಡೂ ಕಡೆಯವರ ನಡುವೆ ಗಲಾಟೆಯಾಗಿತ್ತು.