ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಅಭಿನಯಿಸುತ್ತಿರುವ ‘ಕುಲದಲ್ಲಿ ಕೀಳ್ಯಾವುದೋ’ ಈಗಾಗಲೇ ತನ್ನ ಟೈಟಲ್ ಇಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ‘ರಾಮಾಚಾರಿ’ ಧಾರಾವಾಹಿಯ ಚಾರು ಖ್ಯಾತಿಯ ಮೌನ ಗುಡ್ಡೆಮನೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಅವರ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಸ್ವಾಗತ ಕೋರಿದೆ.
ಈ ಚಿತ್ರದಲ್ಲಿ ಮಡೆನೂರ್ ಮನು ಅವರಿಗೆ ಜೋಡಿಯಾಗಿ ಮೌನ ಗುಡ್ಡೆಮನೆ ಅಭಿನಯಿಸುತ್ತಿದ್ದು, ರಂಗಾಯಣ ರಘು, ಶರತ್ ಲೋಹಿತಾಶ್ವ, ದಿಗಂತ್ ಹಾಗೂ ಸೋನಾಲ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಪರ್ಲ್ ಸಿನಿ ಕ್ರಿಯೇಷನ್ ಬ್ಯಾನರ್ ನಲ್ಲಿ ಸಂತೋಷ್ ಕುಮಾರ್ ಹಾಗೂ ವಿದ್ಯಾ ನಿರ್ಮಾಣ ಮಾಡುತ್ತಿದ್ದು, ಮನೋಮೂರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ.ದೀಪಕ್ ಸಿಎಸ್ ಸಂಕಲನ, ವಿಜಯ್ ಆನಂದ್ ಸಂಭಾಷಣೆ, ವಿನೋದ್, ನರಸಿಂಹ, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ. ಇನ್ನುಳಿದಂತೆ ನಾಗೇಶ್ ನೃತ್ಯ ನಿರ್ದೇಶನವಿದೆ.