‘ಲವ್ ರೆಡ್ಡಿ’ ಚಿತ್ರದ ಟ್ರೈಲರ್ ರಿಲೀಸ್

ಅಂಜನ್ ರಾಮಚಂದ್ರ ಅಭಿನಯದ ಸ್ಮರಣ್​​ ರೆಡ್ಡಿ ನಿರ್ದೇಶನದ ಲವ್ ರೆಡ್ಡಿ ಚಿತ್ರದ ಟ್ರೈಲರ್ ಸೋನಿ ಮ್ಯೂಸಿಕ್ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ ಈ ಟ್ರೈಲರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಕಂಡಿದ್ದು ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಚಿತ್ರದಲ್ಲಿ ಅಂಜನ್ ರಾಮಚಂದ್ರ ಅವರಿಗೆ ಜೋಡಿಯಾಗಿ ಶ್ರಾವಣಿ ಕೃಷ್ಣವೇಣಿ ಅಭಿನಯಿಸಿದ್ದು, ಸುನಂದ ರೆಡ್ಡಿ ಸೇರಿದಂತೆ ಹೇಮಲತಾ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಪ್ರಿನ್ಸ್​ ಹೆನ್ರಿ ಸಂಗೀತ ಸಂಯೋಜನೆ ನೀಡಿದ್ದು, ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ, ಹಾಗೂ ಅಕ್ಷರ್​ ಅಲಿ ಛಾಯಾಗ್ರಹಣ ಅಜಯ್ ಸಾಯಿ ನೃತ್ಯ ನಿರ್ದೇಶನ, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ. ಈ ಸಿನಿಮಾ ಈಗಾಗಲೇ ತೆಲುಗಿನಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿದ್ದು ಇದೀಗ ನವೆಂಬರ್ 22ರಂದು ಕನ್ನಡದ ಭಾಷೆಯಲ್ಲಿ ತೆರೆ ಕಾಣಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read