ನಟಿ ಅನು ಪ್ರಭಾಕರ್ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
1990 ರಲ್ಲಿ ತೆರೆಕಂಡ ಕಾಶಿನಾಥ್ ನಟನೆಯ ‘ಚಪಲ ಚೆನ್ನಿಗರಾಯ’ ಚಿತ್ರದಲ್ಲಿ ಬಾಲಕಲಾವಿದೆಯಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಬಳಿಕ ‘ಸ್ವರ್ಣ ಸಂಸಾರ’ ಹಾಗೂ ‘ಶಾಂತಿ ಕ್ರಾಂತಿ’ ಯಲ್ಲಿ ತೆರೆ ಹಂಚಿಕೊಂಡರು. 1999ರಂದು ‘ಹೃದಯ ಹೃದಯ’ ಚಿತ್ರದಲ್ಲಿ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡ ಇವರಿಗೆ ನಂತರ ಸಾಕಷ್ಟು ಆಫರ್ ಗಳು ಬಂದವು.
ನಟಿ ಅನು ಪ್ರಭಾಕರ್ ‘ಸ್ನೇಹಲೋಕ’ ‘ಶ್ರೀರಸ್ತು ಶುಭಮಸ್ತು’ ‘ಯಾರಿಗೆ ಸಾಲುತ್ತೆ ಸಂಬಳ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು. ಇತ್ತೀಚೆಗೆ ‘ಬೈರಾದೇವಿ’ಯಲ್ಲಿ ಕಾಣಿಸಿಕೊಂಡಿದ್ದ ಅನುಪ್ರಭಾಕರ್ ‘ಹಗ್ಗ’ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ನಿನ್ನೆ ಅಂದರೆ ನವೆಂಬರ್ 9 ಅನು ಪ್ರಭಾಕರ್ ಅವರ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹಿರಿಯ ಕಲಾವಿದರು ಸೇರಿದಂತೆ ಯುವ ನಟ ನಟಿಯರು ಅನುಪ್ರಭಾಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		