alex Certify JOB ALRT : ಬೆಂಗಳೂರಿನಲ್ಲಿ 586 ಗೃಹರಕ್ಷಕ ದಳದ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALRT : ಬೆಂಗಳೂರಿನಲ್ಲಿ 586 ಗೃಹರಕ್ಷಕ ದಳದ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : ಗೃಹರಕ್ಷಕ ದಳದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ 586 ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14 ಘಟಕಗಳಿದ್ದು, ಅದರಲ್ಲಿ ಹೊಸದಾಗಿ ಪರಪ್ಪನ ಅಗ್ರಹಾರ, ವರ್ತೂರು, ಚಿಕ್ಕಜಾಲ, ಚಿಕ್ಕಬಾಣಾವರ, ಕೊತ್ತನೂರು, ವೈಟ್ ಫೀಲ್ಡ್, ಹೆಬ್ಬಗೋಡಿ ಈ ಘಟಕಗಳು ನೂತವಾಗಿ ಆರಂಭಿಸಬೇಕಾಗಿರುತ್ತದೆ.

ಘಟಕಗಳ ಹೆಸರುಗಳು ಮತ್ತು ಖಾಲಿ ಇರುವ ಗೃಹರಕ್ಷಕದ ಸಂಖ್ಯೆ ಹಾಗೂ ಖಾಲಿ ಇರುವ ಸ್ಥಳಗಳು:- ಹೊಸಕೋಟೆ- 06, ದೊಡ್ಡಬಳ್ಳಾಪುರ- 09, ನೆಲಮಂಗಲ – 09, ದಾಬಸ್ಪೇಟೆ – 09 ರಾಜಾನುಕುಂಟೆ – 11, ಆವಲಹಳ್ಳಿ – 08, ದೊಡ್ಡಬೆಳವಂಗಲ – 23, ದೇವನಹಳ್ಳಿ – 05, ಆನೇಕಲ್- 04, ಅತ್ತಿಬೆಲೆ- 03, ಮಾದನಾಯಕನಹಳ್ಳಿ- 03, ಸರ್ಜಾಪುರ- 07, ವಿಜಯಪುರ– 07 ಹಾಗೂ ನೂತನ ಘಟಕಗಳು:- ಪರಪ್ಪನ ಅಗ್ರಹಾರ- 70, ವರ್ತೂರು- 70, ಚಿಕ್ಕಜಾಲ- 65, ಚಿಕ್ಕಬಾಣಾವರ- 70, ಕೊತ್ತನೂರು- 65, ವೈಟ್ಫೀಲ್ಡ್- 70, ಹೆಬ್ಬಗೋಡಿ- 70 ಸೇರಿದಂತೆ ಒಟ್ಟು 586 ಸ್ಥಳಗಳು ಖಾಲಿ ಇರುತ್ತವೆ.

ಕಂಪ್ಯೂಟರ್ ಟೈಪಿಂಗ್ (ಕನ್ನಡ ಮತ್ತು ಇಂಗ್ಲೀಷ್), ಡ್ರೈವರ್ಸ್, ಅಡುಗೆ ಭಟ್ಟರು. ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಪೇಂಟರ್, ಜೆಸಿಬಿ ಡ್ರೈವರ್ಸ್, ಟೆಂಟಿಪಿಕ್ಕಿಂಗ್, ಸ್ವಿಮ್ಮರ್ಸ್. ವೆಲ್ಡರ್ಸ್, ಗಾರ್ಡನರ್ಸ್, ಮೆಕಾನಿಕ್, ದೋಬಿ ಮತ್ತು ಸ್ಕಬಾ ಡೈವಿಂಗ್, ಪ್ಲಂಬರ್ ರವರುಗಳಿಗೆ ಆದ್ಯತೆ ನೀಡಲಾಗುವುದು.
ವಿದ್ಯಾರ್ಹತೆ:- 10ನೇ ತರಗತಿ ಉತ್ತೀರ್ಣ ಆಗಿರಬೇಕು. 19 ವರ್ಷದಿಂದ 50 ವರ್ಷದೊಳಗಿರಬೇಕು. ದೈಹಿಕ ದೃಢಕಾಯರಾಗಿರಬೇಕು. ಯಾವುದೇ ದೈಹಿಕ ನ್ಯೂನತೆ ಇರಬಾರದು. ಅರ್ಜಿ ನಮೂನೆ ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿ.ಸಿ ಅಥವಾ ಒರಿಜಿನಲ್ ಅಂಕಪಟ್ಟಿ ತರಬೇಕು.

ಬೆಂಗಳೂರಿನ ಸಮಾದೇಷ್ಟರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕದಳ ಕಛೇರಿ, ಶೇಷಾದ್ರಿ ರಸ್ತೆ, ಸ್ವಾತಂತ್ರ್ಯ ಉದ್ಯಾನವನ ಎದುರು, ಬೆಂಗಳೂರು-560009 ಇಲ್ಲಿ ಅಕ್ಟೋಬರ್ 18 ರಿಂದ ನವ್ಹೆಂಬರ್ 16 ರ ವರೆಗೆ ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯ ವರೆಗೆ ಉಚಿತವಾಗಿ ಅರ್ಜಿಗಳನ್ನು ವಿತರಿಸಲಾಗುವುದು.
ವಿಶೇಷ ಸೂಚನೆ:- ಗೃಹರಕ್ಷಕದಳದ ಸಂಸ್ಥೆಯು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ 03 ವರ್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿರುತ್ತದೆ. ಇದು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ/ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ. ಸರ್ಕಾರವು ನಿಗಧಿ ಪಡಿಸಿರುವ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ಪಾವತಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ- 080-22263447 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...