ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಚಕ್ಕರೆಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರ ಪರ ಡಿಸಿಎಂ ಡಿಕೆ ಶಿವಕುಮಾರ್ ಮತ ಯಾಚನೆ ಮಾಡಿದರು.
ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಶಾಸಕರಾಗಿದ್ದಾಗ ಯಾವುದೇ ಅಭಿವೃದ್ಧಿಮಾಡಿಲ್ಲ. ಜನರು ಮತ ಹಾಕೋದು ಅವರ ಸೇವೆ ಮಾಡಲು. ಆದರೆ ಕುಮಾರಸ್ವಾಮಿಯವರು ಆ ಸೇವೆಯನ್ನ ಮರೆತು ಯಾವ ನೈತಿಕತೆಯ ಮೇಲೆ ಮತ ಕೇಳ್ತಿದ್ದಾರೋ ಗೊತ್ತಿಲ್ಲ. ನಾವು ಮಾಡಿದಂತಹ ಹಲವು ಜನಪರ ಕಾರ್ಯಗಳನ್ನ ಕುಮಾರಸ್ವಾಮಿ ಅವರು ಈ ಕ್ಷೇತ್ರದ ಜನತೆಗೆ ಮಾಡಿದ್ದಾರಾ? ಇದಕ್ಕೆ ಅವರು ಉತ್ತರ ಕೊಡಬೇಕು. ಯೋಗೇಶ್ವರ್ ಅವರು ರೈತರ ಪರ ಕಾಳಜಿ ಹೊಂದಿದ್ದು, ಹಲವು ಕೆರೆಗಳನ್ನು ತುಂಬಿಸಿದ್ದಾರೆ. ಮನೆಯ ಮಗನಂತೆ ಈ ಕ್ಷೇತ್ರದ ಜನತೆಯ ಪರ ನಿಂತಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಬದುಕನ್ನು ಬದಲಾಯಿಸಲು ಕಟಿಬದ್ಧರಾಗಿ ಈ ಚುನಾವಣೆಯಲ್ಲಿ ನಿಮ್ಮ ಬೆಂಬಲ ಬಯಸುತ್ತಿದ್ದಾರೆ. ಹಾಗಾಗಿ ಚನ್ನಪಟ್ಟಣದ ಜನತೆ ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಚಕ್ಕರೆಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಶ್ರೀ @CPYogeeshwara ಅವರ ಪರ ಮತ ಯಾಚನೆ ಮಾಡಿ ಮಾತನಾಡಿದೆ.
ಕುಮಾರಸ್ವಾಮಿಯವರು ಚನ್ನಪಟ್ಟಣದಿಂದ ಶಾಸಕರಾಗಿದ್ದಾಗ ಯಾವುದೇ ಅಭಿವೃದ್ಧಿಮಾಡಿಲ್ಲ. ಜನರು ಮತ ಹಾಕೋದು ಅವರ ಸೇವೆ ಮಾಡಲು. ಆದರೆ… pic.twitter.com/I8Wd1EQiyy
— DK Shivakumar (@DKShivakumar) November 8, 2024