ಸಿಬಿಐ ನಿವೃತ್ತ ಹೆಚ್ಚುವರಿ ಎಸ್.ಪಿ., ಎನ್.ಸುರೇಂದ್ರನ್, ಕೇರಳದ ಅಲಪ್ಪುಳದ ಮುತ್ತುಕುಲಂನಲ್ಲಿರುವ ತಮ್ಮ ಕುಟುಂಬದ ಮನೆ ಮತ್ತು ಭೂಮಿಯನ್ನು ಪಠನಪುರಂನಲ್ಲಿರುವ ಲಾಭರಹಿತ ದತ್ತಿ ಸಂಸ್ಥೆ ಗಾಂಧಿ ಭವನಕ್ಕೆ ದಾನ ಮಾಡಿದ್ದಾರೆ.
ಸಮಾಜಕ್ಕೆ ಮರಳಿ ಕೊಡುವ ಚಿಂತನೆಯನ್ನು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಸುರೇಂದ್ರನ್ ಅವರು ತಮ್ಮ ಮನೆ ‘ಪುತಿಯ ವೀಡು’ ಜೊತೆಗೆ 47 ಸೆಂಟ್ಸ್ ಜಮೀನನ್ನು ಸಂಸ್ಥೆಗೆ ಉಯಿಲು ಮಾಡಿದ್ದಾರೆ. ಇಂದು ಬೆಳಿಗ್ಗೆ ಇಲ್ಲಿ ನಿರ್ಮಾಣವಾಗಲಿರುವ ನೂತನ ಗಾಂಧಿ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ತಮ್ಮ ಕುಟುಂಬ ಹೋದ ನಂತರ ಜಮೀನು, ಮನೆ ಸದ್ಬಳಕೆಯಾಗಲಿ ಎಂಬ ಹಂಬಲದಿಂದ ಆಸ್ತಿ ದಾನ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ರೈತರಾದ ಕೆ. ನಾಣು ಮತ್ತು ಕೆ. ಪಂಕಜಾಕ್ಷಿ ಅವರ ಪುತ್ರ ಸುರೇಂದ್ರನ್ ವಿವರಿಸಿದ್ದಾರೆ. “ಹೀಗೆ ಸ್ಥಳವನ್ನು ಬಿಟ್ಟು ಏನು ಪ್ರಯೋಜನ ? ನೀವು ಈ ಪ್ರಪಂಚವನ್ನು ತೊರೆದಾಗ, ನಿಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ” ಎಂದು ಹೇಳಿರುವ ಅವರು “ನಾನು, ನನ್ನ ಹೆಂಡತಿ ಮತ್ತು ನನ್ನ ತಾಯಿ ಮಾತ್ರ ಇದ್ದೇವೆ. ನಮ್ಮ ಈ ಕಾರ್ಯದಿಂದ ಇನ್ನಷ್ಟು ತಾಯಿ – ತಂದೆ ನಮ್ಮೊಂದಿಗೆ ಸೇರಲಿ” ಎಂದು ಭಾವುಕರಾಗಿ ಹೇಳಿದ್ದಾರೆ.
ಸುರೇಂದ್ರನ್ ಮತ್ತು ಅವರ ಪತ್ನಿ ಹತ್ತಿರದ ಮನೆಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಮನೆಯಲ್ಲಿರುವ ಸುರೇಂದ್ರನ್ ಅವರ ತಾಯಿ, ಸುರೇಂದ್ರನ್ ಅವರ ತಂದೆಯ ಅಂತ್ಯಕ್ರಿಯೆಯ ಸ್ಥಳವಾಗಿರುವುದರಿಂದ ಅಲ್ಲಿಯೇ ಇರುತ್ತಾರೆ. ಮೂಲ ಕುಟುಂಬದ ಮನೆಯನ್ನು ನಿರ್ವಹಿಸಲಾಗುವುದು ಮತ್ತು ತಮ್ಮ ತಾಯಿ ಕಳೆದ ಕೆಲವು ತಿಂಗಳುಗಳಿಂದ ಗಾಂಧಿ ಭವನದ ಮತ್ತೊಬ್ಬ ವೃದ್ಧ ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಸುರೇಂದ್ರನ್ ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಗಾಂಧಿ ಭವನದ ಕಾರ್ಯದರ್ಶಿ ಪುನಲೂರು ಸೋಮರಾಜನ್ ಅವರನ್ನು ಭೇಟಿಯಾದ ಸುರೇಂದ್ರನ್ ಅವರ ಅಲ್ಲಿನ ಸೇವಾ ಮನೋಭಾವಕ್ಕೆ ಮಾರು ಹೋಗಿದ್ದರು. ಸಿಬಿಐಗೆ ಸೇರುವ ಮೊದಲು, ಸುರೇಂದ್ರನ್ ಭಾರತೀಯ ವಾಯುಪಡೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸಿಬಿಐನಲ್ಲಿನ ಅವರ ತನಿಖಾ ವೃತ್ತಿ ಜೀವನವು ಹಲವಾರು ಉನ್ನತ-ಪ್ರಕರಣಗಳಿಂದ ಗುರುತಿಸಲ್ಪಟ್ಟಿದ್ದು, ಅತ್ಯುತ್ತಮ ತನಿಖಾಧಿಕಾರಿಯಾಗಿದ್ದಕ್ಕಾಗಿ ಅವರಿಗೆ ಚಿನ್ನದ ಪದಕವನ್ನು ಸಹ ನೀಡಲಾಗಿದೆ.
ಸುರೇಂದ್ರನ್ ಅವರು ಹೆಚ್ಚುವರಿ ಎಸ್ಪಿಯಾಗಿ ಸಿಬಿಐನಿಂದ ನಿವೃತ್ತರಾಗಿದ್ದಾರೆ ಮತ್ತು ಅವರ ಪತ್ನಿ ಸತ್ಯಮ್ಮ ಕೊಳ್ಳಕಲ್ ಅವರು ನಿವೃತ್ತ ಮುಖ್ಯೋಪಾಧ್ಯಾಯಿನಿಯಾಗಿದ್ದಾರೆ.