ಬೆಂಗಳೂರು: ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಿದೆ.
ಈ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಿಂದಲೂ ವಂಚಿತರಾಗಿದ್ದಾರೆ. ಇದರ ಬೆನ್ನಲ್ಲೇ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿರುವುದು 10,000 ಕುಟುಂಬಗಳಿಗೆ ಆತಂಕ ತಂದಿದೆ.
ತಾವು ಐಟಿ, ಜಿಎಸ್‌ಟಿ ಪಾವತಿದಾರರಲ್ಲ. ಆದರೂ, ಐಟಿ, ಜಿಎಸ್‌ಟಿ ಪಾವತಿದಾರರು ಎಂದು ಭಾಗ್ಯಲಕ್ಷ್ಮಿ ಹಣ ಪಾವತಿ ಮಾಡುತ್ತಿಲ್ಲ ಎಂದು ಅರ್ಹ ಸಾವಿರಾರು ಮಹಿಳೆಯರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ ಸುಮಾರು 7-8 ತಿಂಗಳಾಗಿದ್ದರೂ, ಕೆಲವರು ಐಟಿ, ಜಿಎಸ್‌ಟಿ ಪಾವತಿದಾರರಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರೂ ಭಾಗ್ಯಲಕ್ಷ್ಮಿ ಹಣ ಪಾವತಿ ಆಗಿಲ್ಲ.
ರಾಜ್ಯದಲ್ಲಿ ಸುಮಾರು 1.78 ಲಕ್ಷ ಕುಟುಂಬದವರು ಐಟಿಜಿ, ಜಿಎಸ್ಟಿ ಪಾವತಿದಾರರು ಎನ್ನುವ ಕಾರಣಕ್ಕೆ ಬಾಗಲಕ್ಷ್ಮೀ ಯೋಜನೆ ಹಣ ಪಾವತಿಗೆ ತಡೆ ನೀಡಲಾಗಿದೆ.