alex Certify ಟ್ರಂಪ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ ? ವೈರಲ್‌ ಆಗುತ್ತಿದೆ ಅಮೆರಿಕಾ ನೂತನ ಅಧ್ಯಕ್ಷರ ಹಳೆ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ ? ವೈರಲ್‌ ಆಗುತ್ತಿದೆ ಅಮೆರಿಕಾ ನೂತನ ಅಧ್ಯಕ್ಷರ ಹಳೆ ಹೇಳಿಕೆ

ವಿಶ್ವದ ದೊಡ್ಡಣ್ಣ ಅಮೆರಿಕಾ ನೂತನ ಅಧ್ಯಕ್ಷರಾಗಿ ಡೋನಾಲ್ಡ್‌ ಟ್ರಂಪ್‌ ಆಯ್ಕೆಯಾಗಿದ್ದಾರೆ. ವಿಶ್ವದ ಶಕ್ತಿಶಾಲಿ ರಾಷ್ಟ್ರ ಎಂದೇ ಪರಿಗಣಿಸಲ್ಪಡುವ ಅಮೆರಿಕಾದ 47 ಅಧ್ಯಕ್ಷರಾಗಿ ಡೋನಾಲ್ಡ್‌ ಟ್ರಂಪ್‌ ಚುನಾಯಿತರಾಗಿದ್ದು, ಇದು ಅವರ ಎರಡನೇ ಅವಧಿ ಎಂಬುದು ಗಮನಾರ್ಹ.

ಡೋನಾಲ್ಡ್‌ ಟ್ರಂಪ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಈ ಹಿಂದೆ ಅಂದರೆ 2018 ರಲ್ಲಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದ ವಿಚಾರ ಮುನ್ನಲೆಗೆ ಬಂದಿದ್ದು, ಹಿಂದಿನ 15 ವರ್ಷಗಳಲ್ಲಿ $ 33 ಶತಕೋಟಿ ಸಹಾಯವನ್ನು ಪಡೆದಿದ್ದರೂ ಸಹ ಅಮೆರಿಕಾವನ್ನು ಪಾಕಿಸ್ತಾನ ವಂಚಿಸಿತ್ತು ಎಂದು ಆರೋಪಿಸಿದ್ದರು. ಹೀಗಾಗಿ ಇದೀಗ ಟ್ರಂಪ್‌ ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷರಾಗಿರುವುದರಿಂದ ಪಾಕಿಸ್ತಾನದ ವಿರುದ್ದ ಮತ್ತಷ್ಟು ಕಠಿಣ ನಿಲುವು ತಳೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪ್ರಯತ್ನಗಳನ್ನು ದುರ್ಬಲಗೊಳಿಸುವ ಮೂಲಕ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ಪಾಕ್ ನೀಡುತ್ತಿದೆ ಎಂದು ಟ್ರಂಪ್ ಹೇಳಿದ್ದರು.

ಇದರ ಜೊತೆಗೆ ಭಾರತದೊಂದಿಗೆ ಬಲವಾದ ಸಂಬಂಧ ಬೆಳೆಸಲು ಟ್ರಂಪ್‌ ಆದ್ಯತೆ ನೀಡಬಹುದು ಎನ್ನಲಾಗಿದ್ದು, ವಿಶೇಷವಾಗಿ ಚೀನಾದ ಹೆಚ್ಚುತ್ತಿರುವ ಶಕ್ತಿಗೆ ಪ್ರತಿಯಾಗಿ ಹಾಗೂ ಭವಿಷ್ಯದ ಯುಎಸ್ ವಿದೇಶಾಂಗ ನೀತಿಯಲ್ಲಿ ಪಾಕಿಸ್ತಾನವನ್ನು ಬದಿಗೊತ್ತಬಹುದು ಎಂದು ಹೇಳಲಾಗುತ್ತಿದೆ.

ಟ್ರಂಪ್ ಅವರ ಮೊದಲ ಅವಧಿಯಲ್ಲಿ ವಿದೇಶಾಂಗ ನೀತಿಯ ಆದ್ಯತೆಗಳು ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸುವುದರ ಮೇಲೆ ಹೆಚ್ಚು ಗಮನಹರಿಸಿದ್ದವು. ಎರಡನೇ ಅವಧಿಯಲ್ಲಿ ಯುಎಸ್-ಭಾರತ ಸಂಬಂಧಕ್ಕೆ ಮತ್ತಷ್ಟು ಆದ್ಯತೆ ನೀಡುವ ಸಾಧ್ಯತೆಯಿದೆ, ಅಲ್ಲದೇ ಪಾಕಿಸ್ತಾನಕ್ಕೆ ಯುಎಸ್ ನೀಡುವ ನೆರವನ್ನು ಮಿತಿಗೊಳಿಸುತ್ತದೆ ಮತ್ತು ಚೀನಾದೊಂದಿಗೆ ಪಾಕಿಸ್ತಾನದ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಪರಿಶೀಲಿಸುತ್ತದೆ ಎಂದು ಹೇಳಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...