ಬಾಲಿವುಡ್ ಸ್ಟಾರ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದೀಪಾವಳಿಯ ದಿನದಂದು ತಮ್ಮ ಮಗುವಿನ ಪಾದಗಳ ಚಿತ್ರವನ್ನು ಹಂಚಿಕೊಂಡು ತಮ್ಮ ಮಗಳಿಗೆ ‘ದುವಾ ಪಡುಕೋಣೆ ಸಿಂಗ್’ ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದರು.
‘ದುವಾ ಪಡುಕೋಣೆ ಸಿಂಗ್- ದುವಾ ಎಂದರೆ ಪ್ರಾರ್ಥನೆ, ಮತ್ತು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಈ ಮಗು ಜನಿಸಿದ್ದು, ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ’ ಎಂದು ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ಆದರೆ, ಈ ತಾರಾ ದಂಪತಿ ತಮ್ಮ ಮಗುವಿಗೆ ಇಟ್ಟ ಹೆಸರಿನ ಕಾರಣಕ್ಕೆ ಸೈಬರ್ ದಾಳಿಯನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮಾಧ್ಯಮ ಬಳಕೆದಾರರು ದುವಾ ಎಂಬ ಹೆಸರನ್ನು ಆಯ್ಕೆ ಮಾಡಿರುವ ದಂಪತಿಗಳ ನಿರ್ಧಾರವನ್ನು ಪ್ರಶ್ನಿಸಿದ್ದಾರೆ, ದಂಪತಿಗಳು ತಮ್ಮ ಮಗುವಿಗೆ ಮುಸ್ಲಿಂ ಹೆಸರನ್ನು ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.
‘ಪ್ರಾರ್ಥನಾ’ ಎಂಬ ಸಾಂಪ್ರದಾಯಿಕ ಹಿಂದೂ ಹೆಸರಿನ ಬದಲು ದಂಪತಿಗಳು ಮಗುವಿಗೆ ದುವಾ ಎಂದು ಏಕೆ ಹೆಸರಿಸಿದ್ದಾರೆ ಎಂದು ಕೆಲವರು ಕೇಳಿದ್ದಾರೆ.
ನೀವಿಬ್ಬರೂ ಹಿಂದೂಗಳು ಎಂಬುದನ್ನು ಮರೆತಿದ್ದೀರಾ ? ಮಗುವಿಗೆ ಪ್ರಾರ್ಥನಾ ಎಂದು ಏಕೆ ಹೆಸರಿಸಲಿಲ್ಲ?’ ಎಂದು ಓರ್ವ ಕಾಮೆಂಟ್ ಮಾಡಿದ್ದಾನೆ.