ನವದೆಹಲಿ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವಾಗ ಕೆಲವು ಮತ ಕೇಂದ್ರಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚುನಾವಣೆ ನಡುವೆ ಕೆಲವು ಮತ ಕೇಂದ್ರಗಳಿಗೆ ಕಿಡಿಗೇಡಿಗಳು ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಲವಾರು ರಾಜ್ಯಗಳಲ್ಲಿನ ಮತದಾನ ಸ್ಥಳಗಳಿಗೆ ಬಾಂಬ್ ಬೆದರಿಕೆಗಳ ಬಗ್ಗೆ ಎಫ್ಬಿಐಗೆ ತಿಳಿದಿದೆ, ಅವುಗಳಲ್ಲಿ ಅನೇಕವು ರಷ್ಯಾದ ಇಮೇಲ್ ಡೊಮೇನ್ಗಳಿಂದ ಹುಟ್ಟಿಕೊಂಡಿವೆ. ಇಲ್ಲಿಯವರೆಗೆ ಯಾವುದೇ ಬೆದರಿಕೆಗಳು ವಿಶ್ವಾಸಾರ್ಹವೆಂದು ನಿರ್ಧರಿಸಲಾಗಿಲ್ಲ.