alex Certify ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಪಡೆದವರಿಗೆ ಶಾಕ್: ಅನರ್ಹರ 18000 ಪಡಿತರ ಚೀಟಿ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಪಡೆದವರಿಗೆ ಶಾಕ್: ಅನರ್ಹರ 18000 ಪಡಿತರ ಚೀಟಿ ರದ್ದು

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳಲ್ಲಿ 18,0816 ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದು ಮಾಡಿದೆ.

ಆದಾಯ ತೆರಿಗೆ ಪಾವತಿಸುವ 12,193 ಜನರ ಕಾರ್ಡುಗಳನ್ನು ರದ್ದು ಮಾಡಲಾಗಿದೆ. 228 ಸರ್ಕಾರಿ, ಆರೆಸರ್ಕಾರಿ ನೌಕರರ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು, ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿದ್ದ 5447 ಕಾರ್ಡುಗಳನ್ನು ರದ್ದುಪಡಿಸಲಾಗಿದೆ.

ಕಾರ್ಡ್ ರದ್ದಾದವರಲ್ಲಿ ಅನೇಕರು ಬ್ಯಾಂಕ್ ಸಾಲ ಪಡೆಯುವ ಉದ್ದೇಶದಿಂದ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದವರು ಇದ್ದಾರೆ. ಕಾರು ಖರೀದಿ, ಮನೆ ಸಾಲ ಸೇರಿ ವಿವಿಧ ಸಾಲ ಸೌಲಭ್ಯ ಪಡೆಯಲು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವುದನ್ನು ಅನೇಕ ಬ್ಯಾಂಕುಗಳು ಕಡ್ಡಾಯ ಮಾಡಿವೆ. ಈ ರೀತಿಯ ಸಾಲಕ್ಕಾಗಿ ಅನೇಕರು ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ.

ಈ ಮಾಹಿತಿ ಮತ್ತು ಇನ್ನಿತರೆ ಐಟಿ ಪಾವತಿದಾರರು ಸೇರಿ 12,193 ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ರಾಜ್ಯ ಸರ್ಕಾರಿ ನೌಕರರ ಕುರಿತಾದ ಹೆಚ್ಆರ್ಎಂಎಸ್ ಮಾಹಿತಿ ಆಧರಿಸಿ ಪಡಿತರ ಚೀಟಿ ಹೊಂದಿದ್ದ ಸರ್ಕಾರಿ ನೌಕರರು, ಇಲಾಖೆಗೆ ಲಭ್ಯವಾದ ಮಾಹಿತಿ ಆಧರಿಸಿ ಮೃತರ ಹೆಸರಿನಲ್ಲಿದ್ದ 5447 ಕಾರ್ಡುಗಳನ್ನು ರದ್ದು ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...