ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಳೆದ 7 ತಿಂಗಳ ಹಿಂದೆಯೇ ರೈತರು, ಮಂದಿರಗಳು, ಮಠಗಳಿಗೆ ಸೇರಿದ 21,747 ಆಸ್ತಿಗಳನ್ನು ಕಬಳಿಕೆ ಮಾಡಿ ಖಾತೆ ಬದಲಾಯಿಸಲು ಕಂದಾಯ ಇಲಾಖೆಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಎರಡೂ ಇಲಾಖೆಗಳ ಅಧಿಕಾರಿಗಳು ಚರ್ಚಿಸಿಯೇ ತಿರ್ಮಾನ ಕೈಗೊಂಡಿದ್ದಾರೆ. IPC 420, A1 ಸಿದ್ದರಾಮಯ್ಯ ಅವರ ಅಣತಿ ಮೇಲೆಯೇ ವಕ್ಫ್ ಬೋರ್ಡ್ ಹಾಗೂ ಕಂದಾಯ ಇಲಾಖೆ ಸೇರಿಕೊಂಡು ಕರ್ನಾಟಕದ ಸಂಪತ್ತನ್ನು ದೋಚಿದ್ದಾರೆ. ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕಾಂಗ್ರೆಸ್, ಇದೀಗ ರೈತರಿಗೆ ಕೊಟ್ಟ ನೋಟಿಸ್ ವಾಪಸ್ ಪಡೆಯುವ ಊಸರವಳ್ಳಿ ನಾಟಕ ಆಡುತ್ತಿದೆ ಎಂದು ಕಿಡಿಕಾರಿದೆ.
ಭ್ರಷ್ಟ ಕಾಂಗ್ರೆಸ್ ನ ಕುಮ್ಮಕ್ಕಿನಿಂದ ಮೆರೆದಾಡುತ್ತಿರುವ ವಕ್ಫ್ ಬೋರ್ಡ್‌ನ ಹಗಲು ದರೋಡೆ ವಿರುದ್ಧ ಬಿಜೆಪಿಯು ಬೀದಿಗಿಳಿದು ಯಶಸ್ವಿಯಾಗಿ ಪ್ರತಿಭಟನೆ ನಡೆಸಿದೆ.
ರಾಜ್ಯಾದ್ಯಂತ ಬಿಜೆಪಿಯ ಪ್ರತಿಭಟನೆಗೆ ರೈತರು, ಮಠಾಧೀಶರು, ಜನಸಾಮಾನ್ಯರು ಜತೆಗೂಡಿ ಬೆಂಬಲಿಸಿದ್ದಾರೆ.
ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜೀನಾಮೆ ನೀಡುವವರೆಗೂ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದು ತುಳಿಸಿದೆ.