ಜಬಲ್ಪುರ (ಮಧ್ಯಪ್ರದೇಶ): ಕಾಲೇಜು ಕಟ್ಟಡದಲ್ಲಿಯೇ ಇಬ್ಬರು ಸಹಪಾಠಿಗಳು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದು, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಈ ಘಟನೆ ನಂತರ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ಜಬಲ್ಪುರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.
ನೂರಾರು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡು ಘೋಷಣೆಗಳನ್ನು ಕೂಗುತ್ತಾ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಇಬ್ಬರು ಆರೋಪಿಗಳನ್ನು ನೂರ್ ಮೊಹಮ್ಮದ್ ಮತ್ತು ಸತ್ಯಂ ಅವಸ್ತಿ ಎಂದು ಗುರುತಿಸಲಾಗಿದೆ. ಅವರು ವಿದ್ಯಾರ್ಥಿನಿಯನ್ನು ಕಾಲೇಜು ಕಟ್ಟಡದ ಮೂರನೇ ಮಹಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಇದರಿಂದ ಕೆರಳಿದ ಎಬಿವಿಪಿ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಕಾಲೇಜಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನಕಾರರು, ಕಾಲೇಜು “ಲವ್ ಜಿಹಾದ್ ಕೇಂದ್ರ” ಎಂದು ಆರೋಪಿಸಿದರಲ್ಲದೇ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ದೂರಿನ ಮೇರೆಗೆ ಪೊಲೀಸರು ನೂರ್ ಮೊಹಮ್ಮದ್ ಮತ್ತು ಸತ್ಯಂ ಅವಸ್ತಿ ಇಬ್ಬರನ್ನೂ ಅಕ್ಟೋಬರ್ 25 ರಂದು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಆದಾಗ್ಯೂ, ABVP ಕಾರ್ಯಕರ್ತರು ಕಾಲೇಜು ಆಡಳಿತದಿಂದ ಹೊಣೆಗಾರಿಕೆಗಾಗಿ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಸುಧಾರಿತ ಸುರಕ್ಷತಾ ಕ್ರಮಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
#Jabalpur: ABVP Holds Protest At Engineering College, Demands Action After Female Student Assaulted By Two Classmates#MPNews #MadhyaPradesh pic.twitter.com/u47S9IIBOs
— Free Press Madhya Pradesh (@FreePressMP) November 5, 2024