ತಪಾಸಣೆ ವೇಳೆ ಪ್ರಯಾಣಿಕರತ್ತ ಕೈ ಬೀಸಿದ ರೈಲ್ವೇ ಸಚಿವರು; ವಿಡಿಯೋ ವೈರಲ್‌ ಬಳಿಕ ನೆಟ್ಟಿಗರ ಟ್ರೋಲ್

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿನಿಂದ ಪ್ರಯಾಣಿಕರಿಗೆ ಕೈ ಬೀಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು,ಇದರ ನಂತರ ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡಿದ್ದಾರೆ.

ವೈರಲ್ ಆದ ಕ್ಲಿಪ್‌ನಲ್ಲಿ, ಕೇರಳದ ಕೋಝಿಕೋಡ್‌ನ ಆಲುವಾದಲ್ಲಿ ಕಿಟಕಿಯ ಟ್ರೇಲಿಂಗ್ ಮತ್ತು ನಿಲ್ದಾಣದ ತಪಾಸಣೆಯ ನಂತರ ಅಶ್ವಿನಿ ವೈಷ್ಣವ್ ಜನರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಅಶ್ವಿನಿ ವೈಷ್ಣವ್ ಅವರ ವೀಡಿಯೊ ವೈರಲ್ ಆದ ಬಳಿಕ ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಒಬ್ಬ ಬಳಕೆದಾರ “ರಿಯಲ್ ಮಿನಿಸ್ಟರ್ ರೀಲ್ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸುವುದು” ಎಂದು ಹೇಳಿದರೆ, ಎರಡನೇ ಬಳಕೆದಾರರು “ರೀಲ್ ಮಿನಿಸ್ಟರ್” ಎಂದು ಬರೆದಿದ್ದಾರೆ. ಮೂರನೇ ಬಳಕೆದಾರರು, “ನಮ್ಮ ಪ್ರೀತಿಯ ರೈಲ್ವೆ ಸಚಿವರನ್ನು ‘ರೀಲ್ ಮಿನಿಸ್ಟರ್’ ಎಂದು ಕರೆದು ಅವಮಾನಿಸಬೇಡಿ” ಎಂದು ಹೇಳಿದ್ದಾರೆ.‌

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read