ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಹಲವಾರು ಮನೆಗಳು ಸುಟ್ಟು ಭಸ್ಮವಾಗಿದ್ದು, 9 ಜನರು ಸಾವನ್ನಪ್ಪಿರುವ ಘೋರ ಘಟನೆ ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ನಡೆದಿದೆ.
ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ಪ್ರಕಾರ ಇಂಡೋನೇಷ್ಯಾದಲ್ಲಿ ಕಳೆದ ವಾರದಿಂದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಉಕ್ಕಿ ಹರಿಯುತ್ತಿದ್ದು, ಸ್ಥಳೀಯ ಜನರಿಗೆ ಅಪಾಯದ ಮುನ್ಸೂಚನೆ ನಿಡಲಾಗಿದ್ದು, ಕಟ್ಟೆಚ್ಚರ ಸೂಚಿಸಲಾಗಿದೆ. ಇದೀಗ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾ ಮುಖಿ ಆಗಾಗಾ ಸ್ಫೋತಗೊಳ್ಳುತ್ತಿದ್ದು, ಹಲವು ಮನೆಗಳು ನಾಶವಾಗಿವೆ. ಈವರೆಗೆ 9 ಜನರು ಸಾವನ್ನಪ್ಪಿದ್ದಾರೆ.
ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ವಲಯಗಳನ್ನು ವಿಸ್ತರಿಸಲಾಗಿದೆ. ಗುರುವಾರದಿಂದ ಜ್ವಾಲಾಮುಖಿ ಪ್ರತಿದಿನ 2000 ಮೀಟರ್ ಎತ್ತರದವರೆಗೆ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳುತ್ತಿದೆ. ಬಿಸಿ ಬೂದಿ ಸಮಿಪದ ಹಳ್ಳಿಗಳಿಗೆ ಅಪ್ಪಳಿಸಿದ್ದು, ಅವಘಡದಲ್ಲಿ ಕ್ಯಾಥೋಲಿಕ್ ಸನ್ಯಾಸಿಗಳ ಕಾನ್ವೆಂಟ್ ಸೇರಿದಂತೆ ಹಲವು ಮನೆಗಳು ಸುಟ್ಟು ಹೋಗಿವೆ. 7 ಕಿ.ಮೀವರೆಗೆ ಅಪಾಯದ ವಲಯವನ್ನು ವಿಸ್ತರಿಸಲಾಗಿದೆ.