BREAKING : ದಾವಣಗೆರೆಯಲ್ಲಿ ಸೇತುವೆ ಕುಸಿದು ಟ್ರ್ಯಾಕ್ಟರ್ ಪಲ್ಟಿ , 6 ಟನ್ ಅಡಿಕೆ ನೀರುಪಾಲು.!

ದಾವಣಗೆರೆ : ಸೇತುವೆ ಕುಸಿದು ಟ್ರ್ಯಾಕ್ಟರ್ ಪಲ್ಟಿಯಾಗಿ 6 ಟನ್ ಅಡಿಕೆ ನೀರುಪಾಲಾದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣಪುರ ಕ್ಯಾಂಪ್ ಬಳಿ ನಡೆದಿದೆ.

ಶಿಥಿಲಗೊಂಡಿದ್ದ ಸೇತುವೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾಗ ಸೇತುವೆ ಕುಸಿದಿದೆ. ಕೂಡಲೇ ಟ್ರ್ಯಾಕ್ಟರ್ ನಲ್ಲಿದ್ದ 6 ಕಾರ್ಮಿಕರು ಟ್ರ್ಯಾಕ್ಟರ್ ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ 6 ಟನ್ ಅಡಿಕೆ ನೀರುಪಾಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read