ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಪಟಾಕಿ ಸಿಡಿಸಲು ನಿಷೇಧವಿದ್ದರೂ ದೀಪಾವಳಿ ಹಿನ್ನೆಲೆಯಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಇದೀಗ ಗಾಳಿಯ ಗುಣಮಟ್ಟ ತೀವ್ರವಾಗಿ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ಜನತೆ ಉಸಿರಾಡಲೂ ಸಂಕಷ್ಟಪಡಿವ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ 328ಕ್ಕೆ ಕುಸಿತಗೊಂಡಿದೆ. ಸೋನಿಯಾ ವಿಹಾರ್ ನಲ್ಲಿ 450, ಆನಂದ್ ವಿಹಾರ್ ನಲ್ಲಿ 459, ಬವಾನಾ ಪ್ರದೆಶದಲ್ಲಿ 436ಕ್ಕೆ ವಾಯುಗುಣಮಟ್ಟ ಕುಸಿದಿದೆ.
ಮಾಲಿನ್ಯ ನಿಯಂತ್ರಣ ಮಂದಳಿ ಪ್ರಕಾರ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಲಜಪತ ನಗರ, ಕಲ್ಕಾಜಿ, ಛತ್ತರ್ ಪುರ್, ಜೌನಾಪುರ್, ಕೈಲಾಶ್ ಪೂರ್ವ, ಸಾಕೇತ್, ರೋಹಿಣಿ, ದ್ವಾರಕಾ, ಪಂಜಾಬಿ ಬಾಗ್, ವಿಕಾಸಪುರಿ, ದಿಲ್ಶಾದ್ ಗಾರ್ಡನ್, ಪೂರ್ವ ಹಾಗೂ ಪಶ್ಚಿಮ ದೆಹಲಿಯ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗಿದೆ. ಇದರಿಂದಾಗಿ ದೆಹಲಿಯಾದ್ಯಂತ ವಾಯುಮಾಲಿನ್ಯ ಹೆಚ್ಚಿದ್ದು, ಅತ್ಯಂತ ಕಳಪೆ ವಿಭಾಗಕ್ಕೆ ಸೇರಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಬೆಳಿಗ್ಗೆ 6 ಗಂಟೆಗೆ ಬುರಾರಿ ಕೆಅಸಿಂಗ್ 394, ಜಹಾಂಗೀರ್ ಪುರಿ 387, ದ್ವಾರಕಾ ಸೆಕ್ಟರ್ 375, ರೋಹಿಣಿ 385, ಅಶೋಕ್ ವಿಹಾರ್ 384, ಐಜಿಐ ವಿಮನ ನಿಲ್ದಾಣ 375 , ಆನಂದ್ ವಿಹಾರ್ 395ಕ್ಕೆ ಗಾಳಿ ಗುಣಮಟ್ಟ ಕುಸಿತವಾಗಿದೆ.