ಬೆಂಗಳೂರು : ಟಾಕ್ಸಿಕ್ ಚಿತ್ರತಂಡದಿಂದ ಮರ ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಹೆಚ್ ಎಂಟಿ ಕಂಪನಿ ಸ್ಪಷ್ಟನೆ ನೀಡಿದೆ.
ಹೆಚ್ ಎಂಟಿಗೆ ಸೇರಿದ ಜಾಗದಲ್ಲಿ ಸೆಟ್ ಹಾಕಲಾಗಿದೆ ಎನ್ನಲಾಗಿತ್ತು, ಇದಕ್ಕೆ ಸಂಬಂಧಿಸಿದಂತೆ ಹೆಚ್ ಎಂಟಿ ಸ್ಪಷ್ಟನೆ ನೀಡಿದ್ದು, ಈ ಜಾಗಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣಕ್ಕಾಗಿ ಮರ ಕಡಿಯಲಾಗಿದೆ ಎಂದು ಆರೋಪಿಸಲಾಗಿದೆ. ಕೆನರಾ ಬ್ಯಾಂಕ್ ಆಸ್ತಿಯನ್ನು ಯಾವುದೇ ಚಿತ್ರೀಕರಣ ಸಂಸ್ಥೆಗೆ ಬಾಡಿಗೆಗೆ ನೀಡುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಎಚ್ ಎಂಟಿ ಸ್ಪಷ್ಟಪಡಿಸಿದೆ. ಇದಲ್ಲದೆ, ಈ ಪ್ರದೇಶದಲ್ಲಿ ಎಚ್ ಎಂಟಿ ಒಡೆತನದ ಭೂಮಿಯಲ್ಲಿ ಯಾವುದೇ ಮರಗಳನ್ನು ಕತ್ತರಿಸಲಾಗಿಲ್ಲ ಎಂದು ಹೇಳಿದೆ.
https://twitter.com/HMT_Group_Cos/status/1851493195089342687?ref_src=twsrc%5Etfw%7Ctwcamp%5Etweetembed%7Ctwterm%5E1851493195089342687%7Ctwgr%5Eed7ef3ad1aa405190c628d165ff77b9e6f8c6865%7Ctwcon%5Es1_&ref_url=https%3A%2F%2Ftv9kannada.com%2Fentertainment%2Fsandalwood%2Ftoxic-movie-set-place-is-not-in-our-hand-says-hmt-amid-controversy-entertainment-news-in-kannada-rmd-927108.html