ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ : ಭಯಾನಕ ದೃಶ್ಯ ‘CCTV’ ಯಲ್ಲಿ ಸೆರೆ |Video

ಬೆಂಗಳೂರಿನಲ್ಲಿ ಪುಂಡರು-ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ದಂಪತಿಗಳಿದ್ದ ಕಾರಿನ ಮೇಲೆ ಕಲ್ಲು ತೂರಿಸಿ ದಾಂಧಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ದಂಪತಿಗಳು ಹಾಗೂ 6 ಮತ್ತು 11 ವರ್ಷದ ಇಬ್ಬರು ಮಕ್ಕಳ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿದ ಪುಂಡರು ಕಾರಿನ ಗ್ಲಾಸ್ ಇಳಿಸುವಂತೆ ಅವಾಜ್ ಹಾಕಿದ್ದಾರೆ . ಇದರಿಂದ ಹೆದರಿಂದ ಅನೂಪ್ ದಂಪತಿ ಗ್ಲಾಸ್ ತೆರೆಯದೆ ಮುಂದೆ ತೆರಳಿದ್ದಾರೆ.

ನಂತರ ಕಾರು ಫಾಲೋ ಮಾಡಿದ ಪುಂಡರು ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಪರಿಣಾಮ ಕಾರಿನಲ್ಲಿದ್ದ 5 ವರ್ಷದ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಬೈಕ್ ನಲ್ಲಿ ಇಬ್ಬರು ಪುಂಡರು ಈ ಕೃತ್ಯ ನಡೆಸಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

https://twitter.com/i/status/1851677414398558334

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read