ನವದೆಹಲಿ: ಧನ್ ತೇರಾಸ್ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ಇದರ ಪರಿಣಾಮ ಚಿನ್ನದ ದರ 300 ರೂ. ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ದರ 10 ಗ್ರಾಂ ಗೆ 81,400 ರೂಪಾಯಿಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿಯ ದರ ಕೂಡ 200 ರೂಪಾಯಿ ಹೆಚ್ಚಳವಾಗಿದ್ದು, ಒಂದು ಕೆಜಿ ಶುದ್ದ ಬೆಳ್ಳಿ ದರ 99,700 ರೂ.ಗೆ ಮಾರಾಟವಾಗಿದೆ. ಕೈಗಾರಿಕೆಗಳು ಮತ್ತು ನಾಣ್ಯ ತಯಾರಿಕರಿಂದ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಬೆಳ್ಳಿಯ ದರ ಏರಿಕೆ ಕಂಡಿದೆ.
ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾರಣಕ್ಕೆ ಐರೋಪ್ಯ ದೇಶಗಳಲ್ಲಿ ಚಿನ್ನದ ವಹಿವಾಟು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ರಷ್ಯಾ –ಉಕ್ರೇನ್, ಇಸ್ರೇಲ್ –ಇರಾನ್, ಗಾಜಾ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ ಚಿನ್ನದ ದರ ಏರುಗತಿಯಲ್ಲಿ ಸಾಗಿದೆ. ಹೂಡಿಕೆಗೆ ಸುರಕ್ಷಿತವೆಂದು ಜನ ಚಿನ್ನದ ಮೇಲೆ ಆಸಕ್ತಿ ತೋರಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.