BIG NEWS: ಆಧ್ಯಾತ್ಮ ವಿಷಯಗಳ ‘ಕಂಟೆಂಟ್ ಕ್ರಿಯೇಟರ್’ 10 ವರ್ಷದ ಬಾಲಕನಿಗೆ ಜೀವ ಬೆದರಿಕೆ 29-10-2024 11:00AM IST / No Comments / Posted In: Latest News, India, Live News ಸಾಮಾಜಿಕ ಜಾಲತಾಣಗಳಲ್ಲಿ ಆಧ್ಯಾತ್ಮ ವಿಷಯದ ಕುರಿತು ಮಾತನಾಡುವ 10 ವರ್ಷದ ಬಾಲಕನಿಗೆ ಲಾರೆನ್ಸ್ ಬಿಷ್ಣೊಯ್ ತಂಡದಿಂದ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ. ಕಂಟೆಂಟ್ ಕ್ರಿಯೇಟರ್ ಅಭಿನವ್ ಆರೋರಾಗೆ ಜೀವ ಬೆದರಿಕೆ ಬಂದಿರುವ ಮಾಹಿತಿಯನ್ನು ಆತನ ತಾಯಿ ANI ಸುದ್ದಿ ಸಂಸ್ಥೆಯ ಜೊತೆ ಮಾತನಾಡುವ ವೇಳೆ ಖಚಿತಪಡಿಸಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಸಹಚರರು ಎನ್ನಲಾದ ಕೆಲವರು ಮೊದಲಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದು, ಇದನ್ನು ಅಭಿನವ್ ಅರೋರಾ ಕುಟುಂಬ ಸ್ವೀಕರಿಸಿರಲಿಲ್ಲ. ಮರುದಿನ ಅದೇ ನಂಬರ್ ನಿಂದ ಜೀವ ಬೆದರಿಕೆಯ ಸಂದೇಶವನ್ನು ಕಳುಹಿಸಲಾಗಿದೆ. ಈ ಕುರಿತು ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅಭಿನವ್ ಅರೋರಾ ತಾಯಿ, ತಮ್ಮ ಪುತ್ರ ಆಧ್ಯಾತ್ಮಿಕ ವಿಷಯಗಳ ಕುರಿತು ಆಸಕ್ತಿ ಹೊಂದಿದ್ದು, ಹೀಗಾಗಿ ಅವುಗಳ ವಿಡಿಯೋ ಮಾಡಿ ಹಂಚಿಕೊಳ್ಳುತ್ತಾನೆ. ಬೆದರಿಕೆ ಎದುರಿಸುವಷ್ಟು ತಪ್ಪನ್ನು ಆತ ಮಾಡಿಲ್ಲ ಎಂದು ಹೇಳಿದ್ದಾರೆ. ಅಭಿನವ್ ಅರೋರಾ ಈ ಹಿಂದೆ ಸ್ವಾಮಿ ರಾಮಭದ್ರಾಚಾರ್ಯ ಅವರ ಕಾರ್ಯಕ್ರಮದ ವೇದಿಕೆ ಮೇಲಿದ್ದಾಗ ಗಾಂಭೀರ್ಯತೆಯನ್ನು ಮರೆತು ಘೋಷಣೆ ಕೂಗಿದ್ದ. ಆ ಸಂದರ್ಭದಲ್ಲಿ ಸ್ವಾಮೀಜಿಯವರು ಅಭಿನವ್ ಗೆ ಛೀಮಾರಿ ಹಾಕಿದ್ದರು. 2023ರಲ್ಲಿ ನಡೆದಿದ್ದ ಈ ಘಟನೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅಭಿನವ್ ಮುನ್ನೆಲೆಗೆ ಬರುವಂತೆ ಮಾಡಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿದ ಅಭಿನವ್ ಅರೋರಾ ತಾಯಿ, ತಮ್ಮ ಮಗ ಆಧ್ಯಾತ್ಮ ವಿಷಯಗಳು ಬಂದಾಗ ಮೈ ಮರೆತು ಬಿಡುತ್ತಾನೆ. ಸ್ವಾಮಿ ರಾಮಭದ್ರಾಚಾರ್ಯರು ಅಂದು ವೇದಿಕೆ ಮೇಲೆ ಆತನಿಗೆ ಬೈದರೂ ಸಹ ಬಳಿಕ ಆಶೀರ್ವದಿಸಿದ್ದರು. ಹಿರಿಯರು ಬೈದರೂ ಸಹ ಅದು ಆಶೀರ್ವಾದವಿದ್ದಂತೆ ಎಂದು ಸಮರ್ಥಿಸಿಕೊಂಡಿದ್ದಾರೆ. #WATCH | Mathura, UP: Family of Abhinav Arora claims that he received a life threat from Lawrence Bishnoi gang. His mother, Jyoti Arora says, "…We received a call message from Lawrence Bishnoi group today where we were being threatened that Abhinav would be killed. Last… pic.twitter.com/A89FNRvOCN — ANI (@ANI) October 28, 2024