ಭಾರತವು ಜಾಗತಿಕ ವೇದಿಕೆಯಲ್ಲಿ ಬೆಳಗುತ್ತಲೇ ಇದ್ದು, ಅದರ ಸಂಸ್ಕೃತಿಯು ವಿಶ್ವಾದ್ಯಂತ ಮನ್ನಣೆಯನ್ನು ಪಡೆಯುತ್ತಿದೆ. ಇತ್ತೀಚೆಗೆ, ಅಮೇರಿಕಾದ ಪೆನ್ಸಿಲ್ವೇನಿಯಾ ರಾಜ್ಯವು ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸುವ ಮೂಲಕ ಐತಿಹಾಸಿಕ ಘೋಷಣೆ ಮಾಡಿದೆ.
ಈ ಕ್ರಮವು ಪಾಕಿಸ್ತಾನದಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ, ಅಲ್ಲಿ ಅನೇಕ ಪಾಕಿಸ್ತಾನಿ
ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಭಾರತದ ಹೆಚ್ಚುತ್ತಿರುವ ಪ್ರಭಾವದ ಪ್ರತಿಬಿಂಬವೆಂದು ಪರಿಗಣಿಸಿದರೆ, ಇತರರು ವಿದೇಶಿ ಸಂಸ್ಕೃತಿ ಸಂಪ್ರದಾಯಗಳನ್ನು ಉತ್ತೇಜಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪೆನ್ಸಿಲ್ವೇನಿಯಾ ಈಗ USನಲ್ಲಿ ಹಿಂದೂ ಹಬ್ಬವನ್ನು ಅಧಿಕೃತವಾಗಿ ಮಹತ್ವದ ರೀತಿಯಲ್ಲಿ ಗುರುತಿಸಿದ ಮೊದಲ ರಾಜ್ಯವಾಗಿದೆ.
US ನಲ್ಲಿ ದೀಪಾವಳಿ ರಜೆಗೆ ಪಾಕಿಸ್ತಾನಿ ಪ್ರತಿಕ್ರಿಯೆ
“ಸನಾ ಅಮ್ಜದ್” YouTube ಚಾನಲ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸನಾ ಅಮ್ಜದ್ ಯುಎಸ್ ನ ಪೆನ್ಸಿಲ್ವೇನಿಯಾ ರಾಜ್ಯವು ಅಕ್ಟೋಬರ್ 31 ರಂದು ಸಾರ್ವಜನಿಕ ರಜೆ ಘೋಷಿಸಿರುವುದನ್ನು ತಿಳಿಸಿದ್ದಾರೆ. “ಕಳೆದ ವರ್ಷ, ಸೌದಿ ಅರೇಬಿಯಾ, ಯುಎಇ ಮತ್ತು ಎಂಟು ದೇಶಗಳಲ್ಲಿ ದೀಪಾವಳಿಯನ್ನು ಆಚರಿಸುವುದನ್ನು ನಾವು ನೋಡಿದ್ದು, ಇತರ ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರಗಳು ಈ ವರ್ಷ ಮತ್ತೆ ದೀಪಾವಳಿಯನ್ನು ಆಚರಿಸುವ ಬಗ್ಗೆ ಪಾಕಿಸ್ತಾನದ ಜನರು ಏನು ಹೇಳುತ್ತಾರೆಂದು ತಿಳಿಯೋಣ” ಎಂದು ಹೇಳಿ ಸಂದರ್ಶನ ನಡೆಸಿದ್ದಾರೆ.
ಇದಕ್ಕೆ ಪಾಕಿಸ್ತಾನಿ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ವೀಡಿಯೊದಲ್ಲಿ, ಪಾಕ್ ಯುವತಿಯೊಬ್ಬಳು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ನನ್ನ ದೃಷ್ಟಿಯಲ್ಲಿ, ಯಾವುದೇ ಅಲ್ಪಸಂಖ್ಯಾತ ಸಮುದಾಯದ ಆಚರಣೆಗಳಿಗೆ ನಾವು ಸಾರ್ವಜನಿಕವಾಗಿ ರಜಾ ದಿನಗಳನ್ನು ಘೋಷಿಸಬಾರದು. ಇದು ನಮ್ಮ ಸಂಸ್ಕೃತಿಗಿಂತ ಅವರ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.
ಮತ್ತೊಂದೆಡೆ, ಪಾಕಿಸ್ತಾನಿ ವ್ಯಕ್ತಿಯೊಬ್ಬರು ಭಾರತದ ಜಾಗತಿಕ ಮನ್ನಣೆಯನ್ನು ಒಪ್ಪಿಕೊಂಡು, ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ಅವರ ಸಂಪನ್ಮೂಲ ಮತ್ತು ಸಹಯೋಗಗಳು ಹೆಚ್ಚುತ್ತಿವೆ ಹೀಗಾಗಿ US ನಂತಹ ಶಕ್ತಿವಂತ ರಾಷ್ಟ್ರ ಅವರನ್ನು ಅಂಗೀಕರಿಸುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ.