ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಅಡುಗೆ ಎಣ್ಣೆ ದರ ಒಂದು ಲೀಟರ್ಗೆ ಒಂದರಿಂದ ಐದು ರೂಪಾಯಿವರೆಗೆ ಹೆಚ್ಚಳವಾಗಿದೆ.
ಅಗತ್ಯ ವಸ್ತು, ತರಕಾರಿ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆ ನಡುವೆ ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಆಮದು ಸುಂಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡಿದ್ದರಿಂದ ಅಡುಗೆ ಎಣ್ಣೆ ದರ 20 ರಿಂದ 25 ರೂಪಾಯಿ ಹೆಚ್ಚಳವಾಗಿತ್ತು. ಇದೀಗ ಮತ್ತೆ 5 ರೂವರೆಗೆ ಹೆಚ್ಚಳವಾಗಿದೆ.
ಸಗಟು ದರದಲ್ಲಿ ಪ್ರತಿ ಲೀಟರ್ ಸೂರ್ಯಕಾಂತಿ ಎಣ್ಣೆ ದರ ಕಳೆದ ವಾರ 120ರೂವರೆಗೂ ಇದ್ದು, ಈಗ 128 ರೂ. ಆಗಿದೆ. ತಾಳೆಎಣ್ಣೆ ದರ 117.50 ರೂ.ನಿಂದ 120 ರೂಪಾಯಿ ದಾಟಿದೆ. ಸೋಯಾಬೀನ್ ಎಣ್ಣೆ ದರ ಕೆಜಿ 20-22 ರೂ. ಹೆಚ್ಚಳವಾಗಿದೆ.
ಹಬ್ಬದ ಹಬ್ಬದ ನೆಪದಲ್ಲಿ ದರ ಹೆಚ್ಚಳವಾಗಿದೆ. ಇನ್ನು ತರಕಾರಿ ಬೆಲೆ ಕೂಡ ದುಬಾರಿಯಾಗಿದೆ. ಅಕಾಲಿಕ ಮಳೆಯಿಂದ ಬೆಳೆ ಹಾಳಾಗಿದ್ದರಿಂದ ಟೊಮೆಟೊ ತರ ಕೆಜಿಗೆ 60 ರಿಂದ 90 ರೂ., ಈರುಳ್ಳಿ 60 ರಿಂದ 70 ರೂ., ಬೀನ್ಸ್ 220 ರೂ. ವರೆಗೂ ತಲುಪಿದೆ. ಬೆಳ್ಳುಳ್ಳಿ ಕೆಜಿಗೆ 380 ರೂ.ವರೆಗೂ ಮಾರಾಟವಾಗುತ್ತಿದೆ.