ಬೆಂಗಳೂರು: ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ಕಟ್ಟಡ ಕುಸಿದು ದುರಂತ ಸಂಭವಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಟ್ಟಡಗಳ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿದೆ.
ಬಾಬುಸಾಪಾಳ್ಯದಲ್ಲಿ ನಿರ್ಮಾಣಹಂತದ ಕಟ್ಟಡ ಕುಸಿದು 8 ಜನರು ಸಾವನ್ನಪ್ಪಿದ್ದರು. ಘಟನೆ ಬೆನ್ನಲ್ಲೇ ಬೆಂಗಳೂರುನ ಹಲವು ಕಟ್ಟಡಗಳು ಕುಸಿಯುವ ಹಂತದಲ್ಲಿರುವ ಬಗ್ಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ನಾಳೆಯಿಂದ ಬೆಂಗಳೂರು ನಗರದಾದ್ಯಂತ ಕಟ್ಟಡಗಳ ಸರ್ವೆ ಕಾರ್ಯ ಆರಂಭಿಸಲಿದೆ.
ನಾಳೆ ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸಮೀಕ್ಷೆ ಆರಂಭವಾಗಲಿದ್ದು, ಪರವಾನಿಗೆ, ಸ್ಪಾಟ್ ಸರ್ವೆ, ಫೋಟೋ, ಜಿಪಿ ಆರ್ ಎಸ್ ಇತ್ಯಾದಿಗಳನ್ನು ಒಳಗೊಂಡು ಸಮೀಕ್ಷೆ ನಡೆಸಲಾಗುತ್ತದೆ. ಅನಧಿಕೃತ ಕಟ್ಟಡಗಳಿಗೆಸ್ಥಳದಲ್ಲೇ ಸೀಲ್ ಮಾಡಲಾಗುವುದು. ಬೆಂಗಳೂರು ನಗರದಲ್ಲಿ 700ಕ್ಕೂ ಹೆಚ್ಚು ಶಿಥಿಲಗೊಂಡ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬಿಬಿಎಂಪಿ ಸರ್ವೆ ಕಾರ್ಯ ಆರಂಭಿಸಲಿದೆ.