ಇರಾನ್ ಆಡಳಿತದ “ತಿಂಗಳುಗಳ ನಿರಂತರ ದಾಳಿಗಳಿಗೆ” ಪ್ರತೀಕಾರವಾಗಿ ಇಸ್ರೇಲ್ ಇರಾನ್ ಮೇಲೆ ನೇರ ವೈಮಾನಿಕ ದಾಳಿ ನಡೆಸಿದ್ದರಿಂದ ಇಬ್ಬರು ಇರಾನಿನ ಸೈನಿಕರು ಶನಿವಾರ ಸಾವನ್ನಪ್ಪಿದ್ದಾರೆ.
ಇರಾನಿನ ರಾಜಧಾನಿ ಟೆಹ್ರಾನ್ ಮತ್ತು ಹತ್ತಿರದ ಪ್ರದೇಶಗಳ ಮೇಲೆ ಕನಿಷ್ಠ ಮೂರು ಸುತ್ತಿನ ದಾಳಿಗಳನ್ನು ನಡೆಸಲಾಯಿತು.
ಇಸ್ರೇಲ್ ನಡೆಸಿರುವ ಸೇಡಿನ ದಾಳಿಯಲ್ಲಿ ಉಂಟಾಗಿರುವ ಹಾನಿ ಸೀಮಿತವಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಆದರೆ ಇರಾನ್ ವಾಯು ಪ್ರದೇಶದಲ್ಲಿ ತನಗೆ ಈಗ ವ್ಯಾಪಕ ಸ್ವಾತಂತ್ರ್ಯ ದೊರಕಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ. ತನ್ನ ವಾಯು ಪ್ರದೇಶದಲ್ಲಿನ ನಾಗರಿಕ ವಿಮಾನಯಾನದ ಸುರಕ್ಷತೆ ಕಾಪಾಡಲು, ದಾಳಿ ನಂತರ ವೈಮಾನಿಕ ಹಾರಾಟಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾಗಿ ಇರಾಕ್ ತಿಳಿಸಿದೆ.