alex Certify ಹೈನುಗಾರಿಕೆ ಮಾಡುವ ರೈತರಿಗೆ ಮಹತ್ವದ ಮುಖ್ಯ ಮಾಹಿತಿ , ಈ ರೀತಿ ಹೆಚ್ಚು ಲಾಭ ಗಳಿಸಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈನುಗಾರಿಕೆ ಮಾಡುವ ರೈತರಿಗೆ ಮಹತ್ವದ ಮುಖ್ಯ ಮಾಹಿತಿ , ಈ ರೀತಿ ಹೆಚ್ಚು ಲಾಭ ಗಳಿಸಿ.!

ಬೆಂಗಳೂರು : : ಉತ್ತಮ ಗುಣಮಟ್ಟದ ಮೇವುನ್ನು ಜಾನುವಾರುಗಳಿಗೆ ನೀಡುವುದರಿಂದ ಹಾಲು ಉತ್ಪಾದನೆ ಹೆಚ್ಚಾಗಲಿದ್ದು,ಇದರಿಂದ ರೈತರ ಆದಾಯವೂ ಕೂಡ ಅಧಿಕವಾಗಲಿದೆ ಎಂದು ಬೀದರ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಪಪತಿಗಳಾದ ಪ್ರೊ.ಕೆ.ಸಿ.ವೀರಣ್ಣ ಅವರು ರೈತರಿಗೆ ತಿಳಿದರು.

ಇಂದು ನಗರದ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜು,ಬಾಲಕರ ಹಾಸ್ಟೆಲ್ ಮೈದಾನದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್. ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ ಮತ್ತು ಭಾರತೀಯ ಡೈರಿ ಅಸೋಸಿಯೇಷನ್-ದಕ್ಷಿಣ ವಲಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮೇವು ಮೇಳ” ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತಾನಾಡಿದರು.

ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ರೈತರು ವಿವಿಧ ಮೇವಿನ ಬೆಳೆಗಳನ್ನು ಬೆಳೆದು ಜಾನುವಾರುಗಳಿಗೆ ಪೋಷಕಾಂಶದ ಮೇವನ್ನು ನೀಡಬೇಕು. ಒಣ ಮೇವುಗಳನ್ನು ಸಂಗ್ರಹಿ ಇಟ್ಟುಕೊಳ್ಳಬೇಕು. ಪ್ರೋಟಿನ್ ಯುಕ್ತ ಮೇವಿನ ಬೆಳೆಗಳ ಮಾಹಿತಿ ಮತ್ತು ಬೀಜಗಳ ಲಭ್ಯವಿದ್ದು ಇದನ್ನು ಎಲ್ಲಾ ರೈತಪಿ ವರ್ಗದವರು ಸದುಪಯೋಗ ಪಡಿಸಿಕೊಳ್ಳಬೇಕೆಂದು ರೈತರಿಗೆ ಸಲಹೆ ನೀಡಿದರು.

ಬಹಳಷ್ಟು ರೈತರು ಮಾವಿನ ತೋಟ, ಚಿಕ್ಕು ತೋಟ, ತೆಂಗಿನ ತೋಟ, ಹೊಂದಿರುತ್ತಾರೆ, ಗಿಡಗಳು ದೊಡ್ಡದಾದ ಮೇಲೆ ಗಿಡಗಳ ಮಧ್ಯದ ಪ್ರದೇಶವನ್ನು ಉಪಯೋಗಿಸುವುದಿಲ್ಲ ಇಂತಹ ಪ್ರದೇಶದಲ್ಲಿ ಮೇವಿನ ಬೆಳೆಯುವುದರಿಂದ ಹೈನುಗಾರಿಕೆ ಖರ್ಚನ್ನು ಕಡಿಮೆ ಮಾಡಿ ಜಾನುವಾರುಗಳಿಗೆ ಮೇವಿ ಉತ್ತಾದನೆ ಮಾಡಿಕೊಂಡು, ಅಧಿಕ ಲಾಭವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ಮೇಳದಲ್ಲಿ ಹೆಚ್ಚಿನ ಖನಿಜಾಂಶ ಇರುವ, ಬೇಸಿಗೆ–ಮಳೆಗಾಲ ಎರಡೂ ಋತುಗಳಲ್ಲಿ ಹಸಿರು ಮೇವು ನೀಡುವ ‘ಮೇವಿನ ಸಜ್ಜೆ’, ನೆಲ–ಹೊಲದ ಅಗತ್ಯವೇ ಇಲ್ಲದಂತೆ ಮನೆ ಮಹಡಿಯಲ್ಲಿಯೂ ಬೆಳೆಯಬಹುದಾದ ಜಲಕೃಷಿ ಮೇವಿನ ಬೆಳೆ, ಹಲವು ಬಾರಿ ಕಟಾವ್ ಮಾಡಬಹುದಾದ ಹೈಬ್ರಿಡ್ ನೇಪಿಯರ್ ಹುಲ್ಲು, ರೇಷ್ಮೆಗೂ ಮೇವಿಗೂ ಬಳಸಬಹುದಾದ ಹಿಪ್ಪು ನೇರಳೆ (ಮಲ್ಬೆರಿ), ನೇಪಿಯರ್ ಮತ್ತು ಜೋಳವನ್ನು ಕಸಿ ಮಾಡಿದ ಪುಲೆ ಜೈವಂತ್ ಹುಲ್ಲುಗಳು ಗಮನ ಸೆಳೆದವು.

ಮೇವು ಸಹಿತ ವಿವಿಧ ಕೃಷಿಗೆ ಬಳಸುವ ಅಡಿಕೆ ಹಾಳೆ ಗೊಬ್ಬರ, ಹಲಸಿನ ಹಣ್ಣಿನ ಗೊಬ್ಬರ, ಎರೆಹುಳು ಗೊಬ್ಬರ ಸಹಿತ ವಿವಿಧ ತರಹದ ಗೊಬ್ಬರಗಳನ್ನು ಪ್ರದರ್ಶಿಸಲಾಯಿತು. ಪಾಚಿ ರೀತಿಯಲ್ಲಿ ಬೆಳೆಯುವ ಅಜೋಲ, ಏಕ ಕಟಾವ್ ದ್ವಿದಳ ಮೇವಿನ ಬೆಳೆಗಳಾದ ಗೋವಿನ ಜೋಳ, ಮೇವಿನ ಜೋಳ, ಮೇವಿನ ಅಲಸಂದಿ, ಹುರುಳಿ, ಸೋಯಾ ಅವರೆ, ಬಹುಕಟಾವು/ ಬಹು ವಾರ್ಷಿಕ ದ್ವಿದಳ ಮೇವಿನ ಬೆಳೆಗಳಾದ ಕುದುರೆ ಮಸಾಲೆ, ದಶರಥ ಹುಲ್ಲು, ಬೇಲಿ ಮೆಂತೆ, ನೇಪಿಯರ್ ಹುಲ್ಲು, ಉತ್ತಮವಾಗಿ ಇಳುವರಿ ನೀಡುವ ಗಿರಿಮೇವು, ಗಿನಿ ಹುಲ್ಲು, ರೋಡ್ಸ್ ಹುಲ್ಲು, ಬ್ರೆಕೇರಿಯ ಹುಲ್ಲು, ಕುದುರೆಮೆಂತೆ, ಸ್ಟೈಲೊ, ಸೂಪರ್ ನೇಪಿಯರ್, ಪ್ಯಾರಾ ಹುಲ್ಲು, ಬರ್ಸಿಮ, ಲೂಸರ್ನ್, ಚವಳಿ, ಮರ ಹುಲ್ಲುಗಳಾದ ಸುಬಾಬುಲ್, ಚೊಗಚಿಗಳು ಪ್ರದರ್ಶನಗೊಂಡವು.
ಈ ಮೇವು ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕರಾದ ಡಾ. ಮಂಜುನಾಥ್ ಎಸ್ ಪಾಳೇಗಾರ್, ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್್ ಡಾ .ಎನ್ ಕೆ ಎಸ್ ಗೌಡ, ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮ ಪ್ರಕಾಶ್, ಕಪಮೀವಿವಿಯ ವ್ಯವಸ್ಥಾಪಕ ಮಂಡಳಿ ಸದಸ್ಯರು, ಸೇರಿದಂತೆ ಇತರೆ ಅಧಿಕಾರಿಗಳು, ರೈತಾಪಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...