ಪ್ರಮುಖ ಆರೋಗ್ಯ ಮತ್ತು ಕ್ಷೇಮ ಕಂಪನಿ,ಸಮುದಾಯ ಮತ್ತು ಪ್ಲಾಟ್ ಫಾರ್ಮ್ ಆಗಿರುವ ಹರ್ಬಲೈಫ್ ಸಂಸ್ಥೆಯು ಐರನ್ ಮ್ಯಾನ್ 70.3 ಇಂಡಿಯಾ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ಕಂಪನಿಯು ಐರನ್‌ಮ್ಯಾನ್ ಕಾರ್ಯಕ್ರಮದ ಜೊತೆಗೆ ಸತತ ಮೂರನೇ ವರ್ಷ ಸಹಯೋಗ ಮಾಡಿಕೊಂಡಿದೆ. ಪ್ರೀಮಿಯಂ ಸ್ಪೋರ್ಟ್ ನ್ಯೂಟ್ರಿಷನ್ ಉತ್ಪನ್ನಗಳ ಮೂಲಕ ಕ್ರೀಡಾಪಟುಗಳಿಗೆ ಬೆಂಬಲ ಒದಗಿಸುವ ಹರ್ಬಲೈಫ್‌ನ ಬದ್ಧತೆಗೆ ಪೂರಕವಾಗಿ ಒಪ್ಪಂದ ಮಾಡಿಕೊಂಡಿದೆ.
ಐರನ್‌ಮ್ಯಾನ್ 70.3 ಕಾರ್ಯಕ್ರಮವು ವರ್ಲ್ಡ್ ಟ್ರಯಥ್ಲಾನ್ ಕಾರ್ಪೊರೇಷನ್ (ಡಬ್ಲ್ಯೂಟಿಸಿ) ಜೊತೆಗೆ ಸಂಯೋಜಿತವಾಗಿರುವ ಮಹತ್ವದ ಟ್ರಯಥ್ಲಾನ್ ಆಗಿದೆ. ಈ ಟ್ರಯಾಥ್ಲಾನ್ ನಲ್ಲಿ ಒಟ್ಟು 113.0 ಕಿಮೀ ಕ್ರಮಿಸಬೇಕಿದ್ದು, ಅದರಲ್ಲಿ 1.9 ಕಿಮೀ ಈಜು, 90 ಕಿಮೀ ಬೈಕ್ ರೈಡ್ ಮತ್ತು 21.1 ಕಿಮೀ ರೇಸ್ ಸೇರಿದೆ. ರೇಸ್ ಗೋವಾದ ಸುಂದರವಾದ ಪ್ರದೇಶಗಳ ಹಿನ್ನೆಲೆಯಲ್ಲಿ ನಡೆಯಲಿದ್ದು, ಕ್ರೀಡಾಪಟುಗಳಿಗೆ ಅಸಾಧಾರಣ ಅನುಭವ ಒದಗಿಸಲಿದೆ.
ಈ ಕಾರ್ಯಕ್ರಮದಲ್ಲಿ ಹರ್ಬಲೈಫ್ ಕ್ರೀಡಾಪಟುಗಳಿಗೆ ಅವಶ್ಯ ನ್ಯೂಟ್ರಿಷನ್ ಉತ್ಪನ್ನಗಳನ್ನು ಒದಗಿಸುತ್ತದೆ. ಕ್ರೀಡಾಪಟುಗಳು ಡೀಹೈಡ್ರೇಟ್ ಆಗದೇ ಇರುವಂತೆ ಮತ್ತು ಉತ್ತಮ ಪ್ರದರ್ಶನ ನೀಡುವಂತೆ ನೋಡಿಕೊಳ್ಳುತ್ತದೆ. ಈ ಯೋಜನೆಯ ಮೂಲಕ ಹರ್ಬಲೈಫ್ ಆರೋಗ್ಯ ಮತ್ತು ಕ್ಷೇಮಕ್ಕೆ ಬೇಕಾದ ಸಮಗ್ರ ವಿಧಾನದ ಭಾಗವಾಗಿರುವ ವ್ಯಾಯಾಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಅಥವಾ ಆರೋಗ್ಯ ಸಾಧಿಸುವ ನಿಟ್ಟಿನಲ್ಲಿ ಅವಶ್ಯ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.