ಆಸ್ಟ್ರೇಲಿಯಾದ ಮೀನುಗಾರ ಜೋಡಿಯೊಂದು ಭಯಾನಕ ವೈಶಿಷ್ಟ್ಯ ಮತ್ತು ವಿಲಕ್ಷಣ ತಲೆಯ ರಚನೆ ಹೊಂದಿರುವ “ಡೂಮ್ಸ್ ಡೇ ಫಿಶ್” ಅನ್ನು ಹಿಡಿದಿದ್ದಾರೆ. ಕರ್ಟಿಸ್ ಪೀಟರ್ಸನ್ ತಾವು ಹಿಡಿದ ಮೀನಿನ ಫೋಟೋವನ್ನು ಫಿಶಿಂಗ್ ಆಸ್ಟ್ರೇಲಿಯಾದ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡ ನಂತರ ಫುಲ್ ವೈರಲ್ ಆಗಿದೆ.
ದೈತ್ಯಾಕಾರದ ಮೀನನ್ನು ಮೆಲ್ವಿಲ್ಲೆ ದ್ವೀಪದ ಕರಾವಳಿಯಲ್ಲಿ ಹಿಡಿಯಲಾಗಿದೆ. ಇದು ಇತ್ತೀಚಿನ ಮೂನ್‌ಲೈಟ್ ಫಿಶಿಂಗ್ ಸೆಷನ್‌ಗಳಲ್ಲಿ ಸಿಕ್ಕಿಬಿದ್ದಿದೆ. ಎನ್‌ಟಿ ನ್ಯೂಸ್‌ನ ಅಂಕಣಕಾರ ಅಲೆಕ್ಸ್ ಜೂಲಿಯಸ್, ಇದನ್ನು ಉಲ್ಲೇಖಿಸುತ್ತಾ, “ಇಲ್ಲಿ ಯಾರಾದರೂ ಅಂತಹ ಮೀನು ಹಿಡಿದಿರುವುದನ್ನು ನಾನು ಮೊದಲ ಬಾರಿಗೆ ಕೇಳಿದ್ದೇನೆ. ಹೆಚ್ಚಿನವು ಈಗಾಗಲೇ ಕಣ್ಮರೆಯಾಗಿವೆ” ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರೂ ಇದಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. X ನಲ್ಲಿ ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ “ಇದು ಕುದುರೆಯಂತಹ ತಲೆಯನ್ನು ಏಕೆ ಹೊಂದಿದೆ?” ಎಂದು ಕೇಳಿದ್ದಾರೆ.
ಇವುಗಳನ್ನು ʼಡೂಮ್ಸ್ ಡೇ ಫಿಶ್ʼ ಎಂದು ಕರೆಯಲು ಕಾರಣವೆಂದರೆ ಅವು ಆಳವಿಲ್ಲದ ನೀರಿನಲ್ಲಿ ಕಂಡುಬಂದಾಗ, ನೀರಿನ ಅಡಿಯಲ್ಲಿ ಭೂಕಂಪ ಸಂಭವಿಸಿದೆ ಮತ್ತು ಶೀಘ್ರದಲ್ಲೇ ಮುಖ್ಯ ಭೂಮಿಗೆ ಬರಬಹುದು” ಎಂದರ್ಥ ಎಂದು X ನಲ್ಲಿ ಮೂರನೇ ಬಳಕೆದಾರರು ಹೇಳಿದ್ದಾರೆ. ಮೂಲತಃ ಓರ್ಫಿಶ್ ಎಂದು ಕರೆಯಲ್ಪಡುವ ಈ ಜೀವಿಗಳು ತಮ್ಮ ಬೇಟೆಯನ್ನು ಬೇಟೆಯಾಡಲು 1000 ಮೀಟರ್‌ಗಳವರೆಗೆ ಲಂಬವಾಗಿ ಈಜುತ್ತವೆ.
ಅವುಗಳಿಗೆ ಪ್ರಳಯದ ಮೀನು ಎಂದು ಏಕೆ ಕರೆಯಲಾಗುತ್ತೆ ?
ಈ ಅಡ್ಡಹೆಸರು ಪ್ರಾಚೀನ ಜಾನಪದದಿಂದ ಬಂದಿದೆ, ವಿಶೇಷವಾಗಿ ಜಪಾನ್‌ನಂತಹ ದೇಶಗಳಲ್ಲಿ ಓರ್ಫಿಶ್ ಅನ್ನು ಗುರುತಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ, ಈ ಜೀವಿಗಳು ಸುನಾಮಿ ಮತ್ತು ಭೂಕಂಪಗಳಂತಹ ಮುಂಬರುವ ನೈಸರ್ಗಿಕ ವಿಪತ್ತುಗಳೊಂದಿಗೆ ಸಂಬಂಧ ಹೊಂದಿವೆ. ಮುಂಬರುವ ಯಾವುದೇ ವಿಪತ್ತುಗಳಿಗೆ ಸಿದ್ಧರಾಗಲು ಜನರನ್ನು ಎಚ್ಚರಿಸಲು ‘ಎಚ್ಚರಿಕೆ’ ಸಂಕೇತವಾಗಿ ಇವುಗಳು ಬರುತ್ತವೆ ಎನ್ನಲಾಗಿದೆ.