ಬೆಂಗಳೂರು : ರಾಜಕಾಲುವೆಯ ಅಕ್ಕಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಿಸುವುದು ನಿಷೇಧಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಅಕ್ಕಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣ ನಿಷೇಧಿಸುವುದು ಹಾಗೂ ಅಪಾಯಕಾರಿ, ಅನಧಿಕೃತ ಕಟ್ಟಡಗಳ ತೆರವು ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಜಕಾಲುವೆಗಳ ಪಕ್ಕದ 50 ಅಡಿ ಜಾಗದಲ್ಲಿ ಯಾರೂ ಕೂಡ ಕಟ್ಟಡಗಳನ್ನು ಕಟ್ಟದಂತೆ ಕ್ರಮವಹಿಸಲು ಸ್ಥಳಗಳನ್ನು ಗುರುತಿಸಿದ್ದು. ಅಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತೇವೆ. ಈ ಕುರಿತು ಆದೇಶಗಳನ್ನು ಹೊರಡಿಸಿ ಜಾಗದ ಮಾಲೀಕರಿಗೆ ಟಿವಿಆರ್ ನೀಡುತ್ತೇವೆ. ಮಳೆ ನೀರು ಹರಿದು ಹೋಗಲು ಎಲ್ಲೆಲ್ಲಿ ಗೇಟ್ ಅಳವಡಿಸಲು ಸಾಧ್ಯವೋ ಅಲ್ಲಿ ಗೇಟ್ ಅಳವಡಿಕೆ ಮಾಡಬೇಕು. ಇದಲ್ಲದೆ ಮಳೆ ನೀರು ಕೆರೆಗಳನ್ನು ಸೇರುವಂತಹ ಯಾವುದಾದರು ಹೊಸ ಯೋಜನೆಯನ್ನು ರೂಪಿಸಬೇಕು ಎಂದರು.