ಮಲೆನಾಡಿನ ಜನತೆಗೆ ಸಿಹಿ ಸುದ್ದಿ: ವಿಮಾನ ಹಾರಾಟಕ್ಕೆ ಮತ್ತೊಂದು ವರ್ಷ ಪರವಾನಗಿ ನವೀಕರಣ

ಶಿವಮೊಗ್ಗ: ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದ ಪರವಾನಗಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಒಂದು ವರ್ಷಕ್ಕೆ ನವೀಕರಣ ಮಾಡಿದೆ.

ಸೋಗಾನೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಜ್ಞರ ತಂಡ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ ಎಂದು ವರದಿ ನೀಡಿತ್ತು. ಇದರ ಆದರದ ಮೇಲೆ ಆಗಸ್ಟ್ ನಲ್ಲಿ ಮುಕ್ತಾಯವಾಗಬೇಕಿದ್ದ ಪರವಾನಗಿಯನ್ನು ಒಂದು ತಿಂಗಳಿಗೆ ನವೀಕರಿಸಲಾಗಿತ್ತು. ನಂತರ ಮತ್ತೊಂದು ತಿಂಗಳು ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅಕ್ಟೋಬರ್ 23 ರಂದು ಮುಕ್ತಾಯವಾಗಬೇಕಿದ್ದ ಪರವಾನಗಿಯನ್ನು 2025ರ ಅಕ್ಟೋಬರ್ 23ರ ವರೆಗೆ ನವೀಕರಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿರುವ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಕರ್ನಾಟಕ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚನೆ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read